ಪ್ರಮುಖ ಸುದ್ದಿ
BP ಹೆಚ್ಚಾದ ಹಿನ್ನೆಲೆ DK ವಿಚಾರಣೆಗೆ ಸ್ಥಗಿತ, ಆಸ್ಪತ್ರೆಗೆ ಶಿವಕುಮಾರ ಶಿಫ್ಟ್
BP ಹೆಚ್ಚಾದ ಹಿನ್ನೆಲೆ DK ಶಿವಕುಮಾರ ಆಸ್ಪತ್ರೆಗೆ ಶಿಫ್ಟ್
ನವ ದೆಹಲಿಃ ಇಡಿ ವಶದಲ್ಲಿರುವ ಮಾಜಿ ಸಚಿವ, ಹಾಲಿ ಶಾಸಕ ಡಿಕೆ ಶಿವಕುಮಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನವ ದೆಹಲಿಯ ಆರ್ ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ರಕ್ತದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಡಿಕೆಶಿ ಅವರ ವಿಚಾರಣೆಯನ್ನು ಸದ್ಯ ಇಡಿ ನಿಲ್ಲಿಸಿದ್ದು, ಅವರನ್ನು ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.
ಡಿಕೆಶಿ ಇನ್ನೂ ಮೂರು ದಿವಸಗಳ ಕಾಲ ಇಡಿ ವಿಚಾರಣೆ ಎದುರಿಸಬೇಕಿದ್ದು, ಅವರ ಆರೋಗ್ಯ ಏರುಪೇರು ಕಾಣುತ್ತಿರುವ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದಾರೆ ಎನ್ನಲಾಗಿದೆ.