ಅಲ್ಲ ಎನ್ನಲಾಗದ ಮಾತು..ದಿನಕ್ಕೊಂದು ಕಥೆ ಓದಿ
ಅಲ್ಲ ಎನ್ನಲಾಗದ ಮಾತು..
ಆನಂದ ಪುರವೆಂಬ ರಾಜ್ಯಕ್ಕೆ ರಂಗನಾಥ ಎಂಬ ರಾಜ, ಅವನು ಮಹಾ ಕೋಪಿಷ್ಠ ದುರಹಂಕಾರಿ ನನಗೆದುರಿಲ್ಲವೆಂಬ ಠೀವಿಗಾರನು.
ಯಾರು ಏನೇ ಹೇಳಿದರೂ ಸಹ ವಿತಂಡವಾದ ವಾದಮಾಡಿ ಇದ್ದುದ್ದನ್ನು ಇಲ್ಲ ಎನ್ನುತ್ತಿದ್ದನು. ಇಲ್ಲದ್ದನ್ನು ಇದೇ ಎನ್ನುತ್ತಿದ್ದನು. ಅವನು ಒಂದು ಮೇಕೆಯನ್ನು ತೋರಿಸಿ ಇದು ನಾಯಿ ಎನ್ನುತ್ತಿದ್ದ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅದು ಬಿಟ್ಟು ಅವನ ಮಾತನ್ನು ಇಲ್ಲ ಎಂದರೆ ಅಥವ ವಾದ ಮಾಡಿದರೆ ಎದುರಾಡಿದರೆ ಅಂತಹವರನ್ನು ಸೆರೆಮನೆಗೆ ಕಳುಹಿಸುತ್ತಿದ್ದನು.
ತನ್ನ ಮಾತನ್ನು ಅನುಮೋದಿಸುವವರಿಗೆ, ಹೊಗಳುವವರಿಗೆ ಬಹುಮಾನ ಪದವಿ ಗೌರವ ನೀಡುತ್ತಿದ್ದನು. ಒಮ್ಮೆ ಅವನು ಹೀಗೆ ಜಾಹಿರಾತು ಮಾಡಿಸಿದನು.
ನಾನು “ಅಲ್ಲ” ಎಂದು ಹೇಳಲು ಆಗದಂತಹ ಮಾತನ್ನು ಹೇಳಿ ಜಯಶಾಲಿಯಾದರೆ ಅಂತಹವರಿಗೆ ಸೂಕ್ತವಾದ ಬಹುಮಾನ ನೀಡಿ ಒಳ್ಳೆಯ ಪದವಿಯನ್ನೂ ನೀಡಿ ಮುಂದೆ ಇಂತಹ ಪ್ರಶ್ನೆಗಳನ್ನು ಕೇಳುವುದನ್ನು ಬಿಟ್ಟುಬಿಡುತ್ತೇನೆ. ಒಂದು ವೇಳೆ ಅವರು ಸೋತರೆ ಅವರಿಗೆ ಮರಣ ದಂಡನೆಯನ್ನು ವಿದಿಸುತ್ತೇನೆ ಎಂದಿತ್ತು.
ರಾಜನ ಹುಚ್ಚು ತಿಳಿದಿದ್ದ ಜನ ಮುಂದೆ ಬರಲಿಲ್ಲ. ಇಂತಹ ಮಾತು ಕೇಳದೆ ಮುಂದೆ ಬಂದು ಮೂರು ಜನ ಮರಣ ದಂಡನೆಗೆ ಯಾದರು. ಒಂದು ದಿನ ಒಬ್ಬ ಯುವಕನು ರಾಜನ ಆಸ್ಥಾನಕ್ಕೆ ಬಂದು `ಮಹಾರಾಜ ತಾವು ತಮ್ಮ ತಂದೆಯಿಂದ ತಮ್ಮ ತಾಯಿಗೆ ಜನಿಸಿದ ಮಗನೋ ಇಲ್ಲವೋ? ಎಂದು ಕೇಳಿದನು.
ಹೀಗೆ ಮಾತಿನಿಂದಲೇ ಮಹಾರಾಜನನ್ನು ಕಟ್ಟಿ ಹಾಕಿದ ಆ ಯುವಕನನ್ನು ಜನ ಅದನ್ನು ಅಲ್ಲ ಎಂದವರುಂಟೆ? ಮಾಹಾರಾಜನ ಬಾಯಿ ಮುಚ್ಚಿಕೊಂಡಿತು. ಮೆಚ್ಚಿಕೊಂಡರು. ರಾಜನು ಅಂದಿನಿಂದ ಅಸಂಬದ್ಧ ಪ್ರಶ್ನೆಗಳನ್ನು ಕೇಳುವುದು ಬಿಟ್ಟು ಆ ಯುವಕನಿಗೆ ಮಂತ್ರಿ ಪದವಿ ನೀಡಿ ಗೌರವಿಸಿದನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.