ಕಥೆ
ಓದಲೇಬೇಕು..”ಮಕ್ಕಳ ಓಟ ಕಲಿಸಿದ ಪಾಠ” ಅತಿ ಚಿಕ್ಕ ಕಥೆ ಅದ್ಭುತ ಸಂದೇಶ
ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಓದಲೇಬೇಕು...
ದಿನಕ್ಕೊಂದು ಕಥೆ
‘ಮಕ್ಕಳ ಓಟ ಕಲಿಸಿದ ಪಾಠ’ ಅದ್ಭುತ ಸಂದೇಶ
ಅದು ಕೆಲವು ವರ್ಷಗಳ ಹಿಂದೆ ಸೀಟೆಲ್‌ನಲ್ಲಿ ನಡೆದ ಒಲಿಂಪಿಕ್ಸ್ ವಿಶೇಷ ಮಕ್ಕಳ ನೂರು ಮೀ, ಓಟದ ಸ್ಪರ್ಧೆ, ಗುಂಡು ಹಾರಿಸುತ್ತಿದ್ದಂತೆ ಎಲ್ಲ ಮಕ್ಕಳೂ ಓಡತೊಡಗಿದರು. ಮಧ್ಯದಲ್ಲೊಬ್ಬ ಬಾಲಕ ಕೆಳಗೆ ಬಿದ್ದು ಅಳತೊಡಗಿದ.
ಇದನ್ನು ನೋಡಿದ ಮುಂದೆ ಹೋದ ಮಕ್ಕಳೆಲ್ಲರೂ ತಿರುಗಿ ಬಂದು ಆತನನ್ನು ಎತ್ತಿ, ಎಲ್ಲರೂ ಕೈ ಕೈ ಹಿಡಿದುಕೊಂಡರು. ನಂತರ ಒಟ್ಟಿಗೇ ಓಡಿ ಗುರಿ ಮುಟ್ಟಿದರು. ವೀಕ್ಷಕರು ಒಂದು ಕ್ಷಣ ಸಂಭೀಭೂತರಾದರು. ನಂತರ ಶುರುವಾದ ಕರತಾಡನ ಅದೆಷ್ಟೋ ನಿಮಿಷಗಳವರೆಗೆ ನಿಲ್ಲಲೇ ಇಲ್ಲ. ಭಾಗವಹಿಸಿದ್ದ ಅಷ್ಟೂ ಮಕ್ಕಳೂ ಪ್ರಥಮ ಬಹುಮಾನ ಗೆದ್ದಿದ್ದರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.