ಕಥೆ

ಅಗತ್ಯವಿದ್ದಲ್ಲಿ ಮಾತ್ರ ಪ್ರತಿಕ್ರಿಯೆ ಕೊಡಿ

ದಿನಕ್ಕೊಂದು ಕಥೆ

ಒಬ್ಬ ಮರದ ಕೆಲಸದವನು ರಾತ್ರಿ ತನ್ನ ಕೆಲಸವನ್ನು ಮುಗಿಸಿ ಎಂದಿನಂತೆ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುತ್ತಾನೆ.

ಆ ಹೊತ್ತಿನಲ್ಲಿ ಒಂದು ದೊಡ್ಡ ಹಾವೊಂದು ಅಂಗಡಿಗೆ ನುಗ್ಗುತ್ತದೆ. ಅಲ್ಲಿ ತನಗೆ ಏನಾದರೂ ಆಹಾರ ಸಿಗಬಹುದೆಂದು ಅತ್ತ ಇತ್ತ ತಿರುಗುತ್ತದೆ. ಹಾವು ಹಾಗೆ ತಿರುಗುತ್ತಿರುವಾಗ, ಅಲ್ಲಿರುವ ಎರಡು ಬದಿಯಲ್ಲಿಯೂ ಹರಿತವಾಗಿರುವ ಒಂದು ಗರಗಸಕ್ಕೆ ತಾಗಿ ಅದಕ್ಕೆ ಸಣ್ಣದಾದ ಗಾಯವಾಗುತ್ತದೆ.

ಹಾವಿಗೆ ಸಿಟ್ಟು ಬಂದು ಆ ಗರಗಸಕ್ಕೆ ಕಚ್ಚುತ್ತದೆ. ಆಗ ಅದರ ಬಾಯಿಗೆ ಕೂಡ ಗಾಯವಾಗುತ್ತದೆ. ಇದರಿಂದ ಹಾವಿನ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತದೆ. ಕೂಡಲೇ ಅದು ಆ ಗರಗಸಕ್ಕೆ ಗಟ್ಟಿಯಾಗಿ ಸುತ್ತಿಕೊಂಡು ತನ್ನ ಹಿಡಿತವನ್ನು ಬಲಪಡಿಸುತ್ತದೆ.

ಮರುದಿನ ಬೆಳಿಗ್ಗೆ ಮರದ ಕೆಲಸದವನು ತನ್ನ ಅಂಗಡಿಯನ್ನು ತೆರೆದಾಗ ಅವನಿಗೆ ಗರಗಸದಲ್ಲಿ ಸುತ್ತಿಕೊಂಡು ಸತ್ತಿದ್ದ ಹಾವು ಕಾಣುತ್ತದೆ.

ಆದರೆ ಹಾವು ಬೇರೆಯವರ ಆಕ್ರಮಣದಿಂದ ಸಾಯಲಿಲ್ಲ, ಬದಲಿಗೆ ತನ್ನದೇ ಆದ ಸಿಟ್ಟು ಮತ್ತು ಹಠದಿಂದ ಸತ್ತಿತ್ತು.

ನಮಗೆ ಕೂಡ ಸಿಟ್ಟು ಬಂದಾಗ ನಾವು ಸಹಿತ ಆ ಹಾವಿನ ಹಾಗೆ, ಸಿಟ್ಟು ಮತ್ತು ಹಗೆಯಿಂದ ಎದುರಾಳಿಗೆ ನಷ್ಟ ಮಾಡಲು ಪ್ರಯತ್ನ ಪಡುತ್ತೇವೆ.

ಆದರೆ ಸ್ವಲ್ಪ ಸಮಯದ ನಂತರ ಅದರಿಂದಾಗಿ ನಮಗೆ ಹೆಚ್ಚು ಹಾನಿಯಾದದ್ದು ಗಮನಕ್ಕೆ ಬರುತ್ತದೆ.
ನಾವು ಸಂತೋಷದಿಂದ ಜೀವಿಸಲು ಕೆಲವೊಂದು ವಸ್ತು, ಜನರು, ಘಟನೆ ಹಾಗು ವಿಷಯಗಳನ್ನು ಕಡೆಗಣಿಸಬೇಕಾಗುತ್ತದೆ.

ನಾವು ಪ್ರತಿಕ್ರಿಯೆ ತೋರಿಸುವ ಅಗತ್ಯತೆ ಇದ್ದಲ್ಲಿ ಮಾತ್ರ ಪ್ರತಿಕ್ರಿಯೆ ತೋರಿಸಬೇಕೆ ವಿನಹ ಎಲ್ಲದಕ್ಕೂ ಪ್ರತಿಕ್ರಿಯೆ ತೋರಿಸಲು ಹೋದಲ್ಲಿ ಅನವಶ್ಯಕವಾಗಿ ನಾವು ಹಾನಿಗೊಳಬೇಕಾಗುವ ಪ್ರಸಂಗವೂ ಬರಬಹುದು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button