ಕಾಗೆಯೇಕೆ ಕಪ್ಪು?
ನೀವು ಕಾಗೆಗಳನ್ನು, ಗೂಬೆಗಳನ್ನು ನೋಡಿದ್ದೀರಲ್ಲವೇ? ಅವುಗಳ ಬಣ್ಣ ಕಪ್ಪು ಎಂಬುದು ನಿಮಗೆ ಗೊತ್ತು ತಾನೆ? ಆದರೆ, ನೀವು ನಂಬುತ್ತೀರಾ, ಅವು ಹಿಂದೊಮ್ಮೆ ಹಿಮದಂತೆ ಬೆಳ್ಳಗಿದ್ದವು ಗೊತ್ತಾ? ಅವು ಕಪ್ಪಾದ ಬಗ್ಗೆ ರಷ್ಯಾದಲ್ಲಿ ಪ್ರಚಲಿತವಿರುವ ಒಂದು ಕತೆ ಹೀಗಿದೆ :–
ಒಂದು ದಿನ ಕಾಗೆಯೂ, ಗೂಬೆಯೂ ಒಂದು ಕಡೆ ಭೇಟಿಯಾದವು. ಕಾಗೆ “ಮಿತ್ರಾ….. ನಾವಿಬ್ಬರೂ ತೀರಾ ಬೆಳ್ಳಗಿದ್ದೇವೆ. ಹಾಗಾಗಿ ನಾವು ಒಬ್ಬರಿಗೊಬ್ಬರು ಬೇರೆ ಬೇರೆ ಬಣ್ಣಗಳನ್ನು ಹಚ್ಚಿಕೊಳ್ಳಬಾರದೇಕೆ?” ಹೇಳಿತು ಗೂಬೆ ಅದಕ್ಕೆ ಒಪ್ಪಿಕೊಂಡಿತು. ಕಾಗೆ ಸಂತೋಷದಿಂದ, ಒಳ್ಳೆಯದು…. ನಾವಿನ್ನು ಕಾರ್ಯ ಪ್ರಾರಂಭಿಸೋಣ. “ಮೊದಲು ನೀನು ನನಗೆ ಬಣ್ಣ ಹಚ್ಚು ನಂತರ ನಾನು ಹಚ್ಚುತ್ತೇನೆ” ಎಂದಿತು.
“ಬೇಡ……ಬೇಡ….. ಈ ಸಲಹೆ ಕೊಟ್ಟವನು ನೀನು, ಹಾಗಾಗಿ ನೀನೇ ಮೊದಲು ಬಣ್ಣ ಹಚ್ಚು…..” ಎಂದಿತು ಗೂಬೆ, ಕಾಗೆ ಒಪ್ಪಿಕೊಂಡು, ತನ್ನ ಗರಿಯೊಂದನ್ನು ಕಿತ್ತು ಅದರಿಂದ ಕಪ್ಪು ಬಣ್ಣವನ್ನು ಗೂಬೆಗೆ ಹಚ್ಚಲು ಪ್ರಾರಂಭಿಸಿತು.
ಬಹಳ ಜಾಗರೂಕತೆಯಿಂದ ಅದು ಗೂಬೆಯ ಪ್ರತಿ ಗರಿಗಳ ಮೇಲೂ ಒಂದೇ ಅಳತೆಯ ಬೂದು ಬಣ್ಣದ ಚುಕ್ಕೆಗಳನ್ನು ಮಾಡಿತು. ಮಗ್ಗಲುಗಳಲ್ಲಿ ಸ್ವಲ್ಪ ದೊಡ್ಡದಾದ ಚುಕ್ಕೆಗಳನ್ನೂ, ಹೊಟ್ಟೆ-ಬೆನ್ನುಗಳ ಮೇಲೆ ಚಿಕ್ಕದಾದ ಚುಕ್ಕಗಳನ್ನು ಬರೆಯಿತು. ತನ್ನ ಕೆಲಸ ಮುಗಿಸಿದ ಕಾಗೆ, “ನಿನ್ನನ್ನು ಎಷ್ಟು ಸುಂದರನನ್ನಾಗಿ ಮಾಡಿದ್ದೇನೆ ನೀನೇ ನೋಡು” ಎಂದಿತು.
ಗೂಬೆ ತನ್ನನ್ನು ನೋಡಿಕೊಂಡು ಶಾಂತವಾಗಿ ಹೇಳಿತು; ”ಸಂತೋಷ….ಈ ಚುಕ್ಕೆಗಳು ಸುಂದರವಾಗಿವೆ. ನಿನಗೂ ಹಾಗೆಯೇ ಬರೆಯುತ್ತೇನೆ. ನೀನೂ ಸುಂದರವಾಗಿ ಕಾಣುವಂತೆ ಮಾಡುತ್ತೇನೆ.”
ಕಾಗೆ ಸೂರ್ಯನಿಗೆ ಮುಖ ಮಾಡಿ, ಕಣ್ಣು ಮುಚ್ಚಿ ಕುಳಿತುಕೊಂಡಿತು. ತುಂಬಾ ಉತ್ಸುಕತೆಯಿಂದ ಗೂಬೆ ಕೆಲಸ ಪ್ರಾರಂಭಿಸಿತು. ಬಣ್ಣ ಹಚ್ಚಿದ ನಂತರ ಅದು ಕಾಗೆಯನ್ನೇ ದಿಟ್ಟಿಸಿ ನೋಡಿತು. ಕಾಗೆ ತನಗಿಂತ ಸುಂದರವಾಗಿರುವಂತೆ ಕಂಡಿತು. ಅಸೂಯೆಯಿಂದ ಅದು ಮತ್ತೆ ಕಾಗೆಯ ಬಳಿ ಬಂದು, ಚುಕ್ಕೆಗಳನ್ನೆಲ್ಲ ಕಪ್ಪು ಬಣ್ಣದಿಂದ ಪೂರ್ತಿಯಾಗಿ ಮುಚ್ಚಿಬಿಟ್ಟಿತು.
ನಂತರ ಒಂದು ಅರೆಕ್ಷಣವೂ ಅಲ್ಲಿ ನಿಲ್ಲದೆ ಹಾರಿಹೋಯಿತು. ಕೆಲಹೊತ್ತಿನ ನಂತರ ಕಾಗೆ ಕಣ್ಣು ತೆರೆದು ತನ್ನನ್ನು ನೋಡಿಕೊರಿಡಿತು. ದುಃಖಗೊಂಡ ಅದು ಕೂಗಿತು; “ಹೋ…ಚೂಪು ಉಗುರಿನ, ತೀಕ್ಷ್ಮ ಕಣ್ಣಿನ ಗೂಬೆಯೇ… ಏನು ಕೆಲಸ ಮಾಡಿಬಿಟ್ಟೆ….ನನ್ನನ್ನು ಕಾಡಿಗೆಗಿಂತ ಕಪ್ಪಾಗಿ ಮಾಡಿಬಿಟ್ಟೆಯಲ್ಲಾ…. ನೀನು ಮೋಸಗಾರ…ದ್ರೋಹಿ.” ಎಂದಿತು.
ಅಂದಿನಿಂದ ಯಾರೂ ಕಪ್ಪಾಗಿದ್ದ ಕಾಗೆಯನ್ನು ನೋಡಲಾರರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.