ಬ್ರಾಹ್ಮಣನೊಬ್ಬನ ಪ್ರಶ್ನೆಗೆ ಉತ್ತರಿಸಿದ ಬುದ್ಧ
ಬುದ್ಧನ ವ್ಯವಸಾಯ
ಒಂದೂರಿನಲ್ಲಿ ಶ್ರೀಮಂತ ಬ್ರಾಹ್ಮಣನೊಬ್ಬನಿದ್ದ. ಒಂದು ದಿನ ಅವನ ಮನೆಯ ಮುಂದೆ ಗೌತಮ ಬುದ್ಧ ನಿಂತು “ಭವತಿ ಭಿಕ್ಷಾಂ ದೇಹಿ” ಎನ್ನುತ್ತಾ ಕೈಚಾಚಿದ. ಬ್ರಾಹ್ಮಣನಿಗೂ ಅಸಾಧ್ಯ ಕೋಪ ಬಂತು. ನಾನು ಕಷ್ಟ ಪಟ್ಟು ದುಡಿದು ಸಂಪಾದಿಸುತ್ತೇನೆ.
ಸಂಪಾದಿಸಿದ್ದನ್ನು ತಿಂದು ಆರಾಮವಾಗಿದ್ದೇನೆ. ಆದರೆ ನೀನು ನೋಡಲಿಕ್ಕೆ ದುಷ್ಟಪುಷ್ಟನಾಗಿದ್ದೀಯ. ಆದರೂ ನಾಚಿಕೆಯಿಲ್ಲದೆ ಭಿಕ್ಷೆ ಬೇಡಲು ಬಂದಿದ್ದೀಯ.
ನಿನಗೆ ಒಂದು ಪುಡಿಗಾಸನ್ನೂ ನೀಡುವುದಿಲ್ಲ ಎಂದು ಮೂದಲಿಸಿದ. ಬುದ್ಧ ಮಂದಸ್ಮಿತನಾಗೇ ಹೇಳಿದ. “ಹೇ ಬ್ರಾಹ್ಮಣ ನೀನು ನನ್ನನ್ನು ವೃಥಾ ನಿಂದಿಸುತ್ತಿದ್ದೀಯಾ. ನಾನು ಸಹ ನಿನ್ನಂತೆಯೇ ಉಳುಮೆ ಮಾಡುತ್ತೇನೆ. ನಾನೇನು ಬೆಳೆಯುತ್ತೇನೋ ಅದನ್ನು ತಿನ್ನುತ್ತೇನೆ ಎಂದ.
ಆಗ ಆ ಬ್ರಾಹ್ಮಣ “ಅಲ್ಲಯಾ ಸುಮ್ಮನೇ ಸುಳ್ಳೇಕೆ ಹೇಳುತ್ತಿ? ನಿನ್ನಲ್ಲಿ ದುಡಿಯುವ ಲಕ್ಷಣಗಳೇನು ಕಾಣುತ್ತಿಲ್ಲ” ಎಂದು ಮತ್ತೆ ಮೊದಲಿಸುತ್ತಾನೆ.
ಆಗ ಬುದ್ಧ ಹೇಳುತ್ತಾನೆ “ಜನರಲ್ಲಿ ವಿಶ್ವಾಸವೆಂಬ ಕಾಲನ್ನು ನಾನು ಬಿತ್ತನೆ ಮಾಡುತ್ತೇನೆ.
ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತೇನೆ. ಅದುವೇ ಮಳೆಯಾಗಿ ಬಿತ್ತಿದ ಬೀಜವು ಫಲವತ್ತಾಗುತ್ತದೆ. ಪ್ರಜ್ಞೆಯು ಅರಳುತ್ತದೆ. ವ್ಯವಸಾಯದ ಪರಿಕರವಾಗುತ್ತದೆ.
ನನ್ನ ಮನಸ್ಸು ಇಂದ್ರಿಯಗಳನ್ನು ಹತೋಟಿಯಲ್ಲಿ ಇಡುತ್ತದೆ. ಬದುಕಿನ ನಿಜವಾದ ಕಾನೂನಿನ ಮೇಲೆ ನಿಗಾ ಇಡುತ್ತೇನೆ. ಶ್ರದ್ಧೆಯಿಂದ ವ್ಯವಹರಿಸುತ್ತೇನೆ.
ನಿರಂತರ ಪರಿಶ್ರಮವೇ ಭೂಮಿಕೆಯಾಗಿದೆ. ಹೀಗೆ ನಾನು ಜೀವನದಲ್ಲಿ ವ್ಯವಸಾಯ ಮಾಡುತ್ತಿದ್ದೇನೆ. ದುಷ್ಟತನ, ಅಹಂಕಾರ, ಭ್ರಮೆ, ಮಮಕಾರ, ಈರ್ಷೆಗಳೆಂಬ ಕಲೆಗಳನ್ನು ಕೀಳುತ್ತಲೇ ವ್ಯವಸಾಯ ಮುಂದುವರಿಸುತ್ತಿದ್ದೇನೆ.
ನನ್ನ ಹೊಲದಲ್ಲಿ ಬೆಳೆದ ಫಲವೇ ನಿರ್ವಾಣ. ಹೀಗೆ ನಾನು ಮಾಡುವ ವ್ಯವಸಾಯದಿಂದ ಜಗದ ದುಃಖವೆಲ್ಲವೂ ನಶಿಸಿ ಹೋಗುತ್ತದೆ” ಎಂದು ವಿವರಿಸುತ್ತಾನೆ ಬುದ್ಧ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882