ಶಹಾಪುರಃ ಹುಚ್ಚು ಮಂಗ ಹಿಡಿಯುವ ಕಾರ್ಯಾಚಾರಣೆ ಯಶಸ್ವಿ
ಕೊನೆಗೂ ಮಂಗ ಹಿಡಿದ ನುರಿತ ತಂಡ
yadgiri, ಶಹಾಪುರಃ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಮಂಗವೊಂದು ಮಕ್ಕಳು ಸೇರಿದಂತೆ 10 ಮಂದಿಗೆ ಕಚ್ಚುವ ಮೂಲಕ ಭಯ ಭೀತಿಯನ್ನು ಉಂಟು ಮಾಡಿತ್ತು.

ಕಳೆದ ಮೂರು ದಿನಗಳಿಂದ ಅರಣ್ಯ ಅಧಿಕಾರಿಗಳ ತಂಡ ಗ್ರಾಮದಲ್ಲಿಯೇ ಬೀಡು ಬಿಟ್ಟು ಹುಚ್ಚು ಹಿಡಿದ ಮಂಗ ಹಿಡಿಯಲು ಕಾರ್ಯಾಚಾರಣೆ ನಡೆಸಿತ್ತು. ಗದಗ ಜ್ಯೂದಿಂದ ಬಂದಿದ್ದ ನುರಿತ ತಂಡ ಮಂಗಳವಾರ ಹುಚ್ಚು ಹಿಡಿದಿದ್ದ ಮಂಗ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಗಾಯಗೊಂಡವರನ್ನು ಧಾರವಾಡ ಮತ್ತು ಹುಬ್ಬಳ್ಳಿ, ತಾಳಿಕೋಟೆ ಮತ್ತು ರಾಯಚೂರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹುಚ್ಚು ಹಿಡಿದ ಮಂಗ ಹಿಡಿಯಲು ಗದಗ ಮೂಲದ ನುರಿತ ತಂಡ ಹಾಗೂ ಸ್ಥಳೀಯ ಅರಣ್ಯ ಅಧಿಕಾರಿಗಳ ತಂಡ ಹರಸಾಹಸ ಪಟ್ಟಿದ್ದು, ಕೊನೆಗೆ ಕಾರ್ಯಾಚಾರಣೆ ಯಶಸ್ವಿಯಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಐ.ಬಿ.ಹೂಗಾರ ತಿಳಿಸಿದ್ದಾರೆ. ಬಂಧಿಸಿದ ಮಂಗ ಗದಗ ಜ್ಯೂಗೆ ಕಳುಹಿಸಿ ಕೊಡಲಾಗಿದೆ. ಗ್ರಾಮಸ್ಥರಲ್ಲಿ ಯಾವುದೇ ಭಯ ಬೇಡವೆಂದು ಅವರು ತಿಳಿಸಿದ್ದಾರೆ.