ಬಸವಭಕ್ತಿ
ಮೌನೇಶ್ವರರು ಸಾಕ್ಷಾತ್ ಶಿವನ ಅವತಾರ-ಅಜೇಂದ್ರ ಶ್ರೀ

ಶಹಾಪುರದಲ್ಲಿ ಮೌನೇಶ್ವರರ ಜಯಂತ್ಯುತ್ಸವ
yadgiri, ಶಹಾಪುರಃ ಶ್ರೀ ಮೌನೇಶ್ವರರು ಸಾಕ್ಷಾತ್ ಶಿವನ ಸ್ವರೂಪಿ, ಉತ್ತರ ಕರ್ನಾಟಕ ಭಾಗದಲ್ಲಿ ಅವರೊಬ್ಬ ಶ್ರೇಷ್ಠ ಸಂತರು ಪವಾಡ ಪುರುಷರು. ತಾಯಿ ಶೇಷಮ್ಮಳಿಗೆ ಮಕ್ಕಳಾಗಿಲ್ಲ ಎಂಬ ಕಾರಣದಿಂದ ಸತತ 12 ವರ್ಷಗಳ ಕಾಲ ಗೋನಾಲಪುರದ ಆದಿಲಿಂಗೇಶ್ವರನಿಗೆ ಭಕ್ತಿಯಿಂದ ಪೂಜೆ ನೆರವೇರಿಸಿದ ಫಲವಾಗಿ ಮೌನೇಶ್ವರರು ಜನ್ಮಿಸಿದ್ದಾರೆ ಎಂಬುದು ಇತಿಹಾಸ ಮತ್ತು ಪುರಾಣದಿಂದ ತಿಳಿದು ಬರುತ್ತದೆ ಎಂದು ಏಕದಂಡಗಿಮಠದ ಅಜೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಸಂತ ಮೌನೇಶ್ವರರ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೌನೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸತ್ಪುರುಷ ಮೌನೇಶ್ವರರು ಈ ಭಾಗದಲ್ಲಿ ಅಗಾಧ ಶಕ್ತಿಯಾಗಿ ಭಕ್ತರ ಪಾಲಿನ ಕಾಮಧೇನು ಆಗಿದ್ದಾರೆ. ಶ್ರದ್ಧಾ ಭಕ್ತಿಯಿಂದ ನಡೆದುಕೊಂಡವರಿಗೆ ವರ ನೀಡುವ ಶ್ರೇಷ್ಠ ಸಂತರಾಗಿದ್ದಾರೆ ಎಂದರು. ಏಕದಂಡಿಗಿಮಠದ ಪೀಠಾಧಿಪತಿ ಕಾಳಹಸ್ತೇಂದ್ರ ಸ್ವಾಮೀಜಿ ಸೇರಿದಂತೆ ವಿಶ್ವಕರ್ಮ ಬಂಧುಗಳು ಇದ್ದರು.