Homeಜನಮನಪ್ರಮುಖ ಸುದ್ದಿ

ಪುರುಷರೇ ಹುಷಾರು: 2050ರ ವೇಳೆಗೆ ಕ್ಯಾನ್ಸರ್‌ನಿಂದ ಸಾವುಗಳ ಸಂಖ್ಯೆ ಏರಿಕೆ ಸಾಧ್ಯತೆ..!

ನವದೆಹಲಿ: 2050 ರ ವೇಳೆಗೆ ಪುರುಷರಲ್ಲಿ ಕ್ಯಾನ್ಸರ್ ಮತ್ತು ಸಾವು ನೋವುಗಳ ಸಂಖ್ಯೆ ಏರಿಕೆಯಾಗಲಿದೆ ಎಂದು ಅಧ್ಯಯನವೊಂದು ಹೇಳಿದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪೀರ್- ರಿವ್ಯೂಡ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ 2022 ರಿಂದ 2050 ರ ನಡುವೆ ಕ್ಯಾನ್ಸರ್ ಸಮಸ್ಯೆಯು ಜಾಗತಿಕವಾಗಿ ಶ ನಿಂದ ಹೆಚ್ಚುವ ಸಾವುಗಳಲ್ಲಿ ಶೇಕಡಾ 93 ರಷ್ಟು ಹೆಚ್ಚಳವಾಗಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಈ ಸಂಖ್ಯೆ 2022 ರಲ್ಲಿ 5.4 ಮಿಲಿಯನ್ ನಿಂದ 2050 ರಲ್ಲಿ 10.5 ಮಿಲಿಯನ್ ಗೆ ಏರುವ ನಿರೀಕ್ಷೆಯಿದೆ. ಪುರುಷರಲ್ಲಿ ಕ್ಯಾನ್ಸರ್ ಸಂಭವ ಮತ್ತು ಮರಣವನ್ನು ಅಂದಾಜು ಮಾಡಲು, ಸಂಶೋಧಕರು 185 ದೇಶಗಳಿಂದ ಡೇಟಾವನ್ನು ಸಂಗ್ರಹಿಸಲಾಗಿತ್ತು. ಪುರುಷರು ಮಹಿಳೆಯರಿಗಿಂತ ಹೆಚ್ಚು ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ, ಇದು ಕ್ಯಾನ್ಸರ್ ಮತ್ತು ಅದಕ್ಕೆ ಸಂಬಂಧಿತ ಸಾವುನೋವುಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಪುರುಷರು ಕ್ಯಾನ್ಸರ್ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಾಗ, ಪರೀಕ್ಷಿಸಿಕೊಳ್ಳಲು ವೈದ್ಯರ ಬಳಿ ಬರುವ ಸಾಧ್ಯತೆ ತುಂಬಾ ಕಡಿಮೆ ಮತ್ತು ಕೆಲಸದಲ್ಲಿ ಕ್ಯಾನ್ಸರ್ ಕಾರಕಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ವಿವರಿಸಿದೆ. ವಯಸ್ಸಾದವರಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕ್ಯಾನ್ಸರ್ ಕಂಡುಬರುತ್ತಿದ್ದು, ಯುವಕರಿಗೆ ಹೋಲಿಸಿದರೆ ಅವರು ಬದುಕುಳಿಯುವ ಪ್ರಮಾಣ ಕಡಿಮೆ ಆಗಿದೆ. ಏಕೆಂದರೆ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದಿರುವುದು, ಅನಾರೋಗ್ಯ ಕೊನೆ ಹಂತಕ್ಕೆ ಹೋದಾಗ ರೋಗನಿರ್ಣಯ ಮಾಡಲಾಗುತ್ತದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ವಯಸ್ಸಾದವರಲ್ಲಿ ಕ್ಯಾನ್ಸರ್ ನಿಂದ ಸಂಭವಿಸಬಹುದಾದ ಸಾವು 3.4 ಮಿಲಿಯನ್ ನಿಂದ 7.7 ಮಿಲಿಯನ್ ಗೆ ಏರುವ ನಿರೀಕ್ಷೆಯಿದೆ. ಅಲ್ಲದೆ ಕ್ಯಾನ್ಸರ್ ಪ್ರಕರಣಗಳು 2022 ರಲ್ಲಿ 6 ಮಿಲಿಯನ್ ನಿಂದ 2050 ರ ವೇಳೆಗೆ 13.1 ಮಿಲಿಯನ್ ಗೆ ಏರುವ ಸಂಭವವಿದೆ ಎಂದು ಅಂದಾಜಿಸಲಾಗಿದೆ. ಯಾವ ರೀತಿಯ ಕ್ಯಾನ್ಸರ್ ಹೆಚ್ಚಾಗುತ್ತದೆ? 2050 ರಲ್ಲಿ ಜಾಗತಿಕವಾಗಿ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚಾಗಲು ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ ಎಂದು ಊಹಿಸಲಾಗಿದೆ. 2022 ರಿಂದ 2050 ರವರೆಗೆ ಶೇಕಡಾ 87 ಕ್ಕಿಂತ ಹೆಚ್ಚಾಗಿದೆ. ಇದರ ನಂತರ ಪ್ರಾಸ್ಟೇಟ್ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಬರುತ್ತದೆ. ಅಲ್ಲದೆ 2050 ರ ವೇಳೆಗೆ ಮೂತ್ರಕೋಶದ ಕ್ಯಾನ್ಸರ್ ಹೆಚ್ಚು ಮಾರಣಾಂತಿಕವಾಗಲಿದೆ ಎಂದು ನಿರೀಕ್ಷಿಸಲಾಗಿದ್ದರೂ, ಚರ್ಮದ ಕ್ಯಾನ್ಸರ್ ಹೆಚ್ಚಿನ ಸಾವುಗಳಿಗೆ ಕಾರಣವಾಗಬಹುದು ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ

Related Articles

Leave a Reply

Your email address will not be published. Required fields are marked *

Back to top button