ಕಥೆವಿನಯ ವಿಶೇಷ

ಕಳ್ಳ ಶಿಷ್ಯನ ಪರ ಮಾತಾಡಿದ ಗುರು ಏಕೆ ಗೊತ್ತಾ.? ಓದಿ

ಸರಿ ಮತ್ತು ತಪ್ಪು ಅದ್ಭುತ ಸಂದೇಶ ಓದಿ

ದಿನಕ್ಕೊಂದು ಕಥೆ

ಸರಿ ಮತ್ತು ತಪ್ಪು

ಬಂಕಿ ಆಧ್ಯಾತ್ಮಕ್ಕೆ ಸಂಬಂಧಪಟ್ಟ ತರಗತಿಗಳನ್ನು ನಡೆಸುವಾಗ ಜಪಾನಿನ ವಿವಿಧ ಭಾಗಗಳಿಂದ ಶಿಷ್ಯರು ತರಗತಿಗೆ ಹಾಜರಾಗುತ್ತಿದ್ದರು. ಇಂಥ ಒಂದು ತರಗತಿಯ ಸಂದರ್ಭದಲ್ಲಿ ಒಬ್ಬ ಶಿಷ್ಯ ಕಳ್ಳತನ ಮಾಡಿ ಸಿಕ್ಕಿಬಿದ್ದ. ಅಪರಾಧಿಯನ್ನು ತರಗತಿಯಿಂದ ಹೊರಹಾಕಬೇಕು ಎಂದು ಬಂಕಿಯಲ್ಲಿ ಕೇಳಿದರು. ಬಂಕಿ ಈ ವಿಚಾರವನ್ನು ನಿರ್ಲಕ್ಷಿಸಿದರು.

ನಂತರ ಮತ್ತೊಮ್ಮೆ ಅದೇ ಶಿಷ್ಯ ಇನ್ನೊಂದು ಕಳ್ಳತನದಲ್ಲಿ ಸಿಕ್ಕಿಬಿದ್ದ ಮತ್ತೆ ವಿಚಾರವನ್ನು ಬಂಕಿಯ ಸಮಕ್ಷಮಕ್ಕೆ ತರಲಾಯಿತು. ಬಂಕಿ ಮತ್ತೆ ವಿಚಾರವನ್ನು ನಿರ್ಲಕ್ಷಿಸಿದರು. ಇದರಿಂದ ಉಳಿದ ಶಿಷ್ಯರಿಗೆ ಸಿಟ್ಟು ಬಂತು. ಕಳ್ಳತನ ಮಾಡಿದ ಶಿಷ್ಯನನ್ನು ಹೊರಹಾಕಬೇಕು, ಇಲ್ಲವೇ ತಾವೇ ದೂರ ಹೋಗುವುದಾಗಿ ಬಂಕಿಗೆ ಎಚ್ಚರಿಸಿದರು.

ಬಂಕಿ ತಲೆ ಕೆಡಿಸಿಕೊಳ್ಳಲಿಲ್ಲ. ಮಕ್ಕಳೇ ನೀವು ತುಂಬಾ ಒಳ್ಳೆಯವರು. ಸದ್ಗುಣ ಸಂಪನ್ನರು. ಸರಿ ಯಾವುದು, ತಪ್ಪು ಯಾವುದು ಎಂಬುದು ನಿಮಗೆ ಅರ್ಥವಾಗುತ್ತದೆ. ನೀವು ಇಲ್ಲಿಂದ ಹೋಗಬಹುದು. ನಿಮಗೆ ಇಚ್ಛೆ ಬಂದಲ್ಲಿ ಅಧ್ಯಯನ ಮಾಡಿಕೊಳ್ಳಬಹುದು. ಆದರೆ ಈ ಬಡ ಶಿಷ್ಯನಿಗೆ ಸರಿ ಯಾವುದು, ತಪ್ಪು ಯಾವುದು ಎಂಬುದೇ ಗೊತ್ತಿಲ್ಲ. ನಾನು “ಅವನ ಕೈಬಿಟ್ಟೆ ಎಂದಾದರೆ ಅವನಿಗೆ ಪಾಠ ಮಾಡುವವರು ಯಾರು? ಯಾರು ಏನೇ ಹೇಳಿದರೂ ನಾನು ಅವನನ್ನು ನನ್ನ ಬಳಿಯೇ ಉಳಿಸಿಕೊಳ್ಳುತ್ತೇನೆ. ನೀವು ಹೊರಡಬಹುದು” ಎಂದರು.

ಕಳ್ಳತನ ಮಾಡುತ್ತಿದ್ದ ಶಿಷ್ಯನ ಕಣ್ಣುಗಳು ಜಿನುಗಿದವು. ಇನ್ನೆಂದೂ ಕಳ್ಳತನ ಮಾಡಲಾರೆ ಎಂದು ಆತ ನಿರ್ಧರಿಸಿದ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button