ಗೃಹಮಂತ್ರಿಗಿರಿಗೆ ರಾಮಲಿಂಗಾರಡ್ಡಿ ಅಯೋಗ್ಯಃ ಸಂಸದ ಕಟೀಲು
ಯಾದಗಿರಿಃ ಕಾಂಗ್ರೆಸ್ ಆಡಳಿತ ಅವಧಿಯಲ್ಲಿಯೇ ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ ಸರಣಿ ಕೊಲೆಗಳು ನಡೆದಿವೆ. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಗೃಹಮಂತ್ರಿಗಿರಿಗೆ ರಾಮಲಿಂಗಾರಡ್ಡಿ ಯೋಗ್ಯರಲ್ಲ ಎಂದು ಬಿಜೆಪಿ ಸಂಸದ ನಳೀನಕುಮಾರ ಕಟೀಲು ತಿಳಿಸಿದರು.
ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಜೀಯವರ ಆಡಳಿತ ಇಡಿ ಜಗತ್ತಿನ ನಾಯಕರು ಪ್ರಶಂಸೆ ಮಾಡಿದ್ದಾರೆ.
ಆದರೆ ದೇಶದೊಳಗಿನ ವಿರೋಧ ಪಕ್ಷ ಕಾಂಗ್ರೆಸ್‍ನವರು ಇಲ್ಲಸಲ್ಲದ ಸುಳ್ಳು ಹೇಳಿ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಮಾಡುವ ಮಾತನಾಡುತ್ತಿದ್ದಾರೆ. ಅವರಿಂದ ದೇಶ ಅಭಿವೃದ್ಧಿ ಕೆಲಸ ಎಂದಿಗೂ ಸಾಧ್ಯವಿಲ್ಲ. ಒಡೆದು ಆಳುವ ನೀತಿ ಮೂಲಕವೇ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಹಂಬಲ ಅವರಿಗಿದೆ ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ಅನಂತಕುಮಾರ ಅವರ ಹೇಳಿಕೆಯಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ಧಕ್ಕೆ ಆಗುವದಿಲ್ಲ ಎಂದು ಸ್ಪಷ್ಟ ಪಡಿಸಿದರು.