ಕಥೆ

ಎರಡನ್ನು ಮರೆಯಿರಿ ಎರಡನ್ನು ನೆನಪಿಡಿ

ಗುರುವಿನ ಅಂತಿಮ ಸಂದೇಶವೇನು..!

ದಿನಕ್ಕೊಂದು ಕಥೆ

ಗುರುವಿನ ಅಂತಿಮ ಸಂದೇಶ

ರ್ವ ಅನುಭಾವಿ ದೊಡ್ಡ ಗುರು. ಎಂಬತ್ತರ ವಯಸ್ಸು. ಹಲವಾರು ದಶಕಗಳವರೆಗೆ ಧರ್ಮ ಪ್ರಸಾರ ಮಾಡಿ ಶರೀರ ಹಣ್ಣಾಗಿತ್ತು. ಇಹಲೋಕದ ಸೇವೆ ಪೂರ್ಣವಾಗಿತ್ತು. ಪರಲೋಕ ಹತ್ತಿರವಾಗಿತ್ತು. ಗುರುಗಳು ಮರಣದ ಹಾಸಿಗೆಯಲ್ಲಿ ಮಲಗಿದ್ದಾರೆ. ಆತ್ಮೀಯ ಶಿಷ್ಯವೃಂದವು ಸುತ್ತುವರೆದಿದೆ‌.

ಗುರುಗಳಿಂದ ಇನ್ನಷ್ಟು ಅನುಭವದ ನುಡಿಗಳನ್ನು ಕೇಳುವ ಕುತೂಹಲ ಶಿಷ್ಯರಲ್ಲಿತ್ತು. ಆದರೆ ಯಾರೂ ಮುಂದೆ ಬಂದು ಗುರುಗಳಿಗೆ ವಿನಂತಿಸಿಕೊಳ್ಳಲು ಧೈರ್ಯ ಮಾಡಲಿಲ್ಲ.

ಕೊನೆಗೆ ಅವರಲ್ಲಿಯ ಒಬ್ಬ ಶಿಷ್ಯ ಧೈರ್ಯದಿಂದ “ಗುರುಗಳೇ, ತಮ್ಮ ಅಂತಿಮ ಸಂದೇಶ ಕೇಳುವ ಇಚ್ಛೆ ನಮ್ಮೆಲ್ಲರದಾಗಿದೆ. ನಮ್ಮ ಬಾಳನ್ನು ಬೆಳಗುವಂಥ ಒಂದೆರಡು ನುಡಿಗಳನ್ನು ಹೇಳಿರಿ!!” ಎಂದು ಕೇಳಿದ. ಶಿಷ್ಯವೃಂದದವರ ಜ್ಞಾನ ಪಿಪಾಸೆಯನ್ನು ಕಂಡು ಗುರುಗಳು ಸಂತಸದಿಂದ “ಎರಡನ್ನು ಮರೆಯಿರಿ. ಎರಡನ್ನು ನೆನಪಿಡಿ” ಎಂದು ಹೇಳಿದರು. ಶಿಷ್ಯರು “ಅವು ಯಾವವು ಗುರುಗಳೆ” ಎಂದು ಕೇಳಿದರು. ಆಗ ಗುರುಗಳು

1.ಯಾರಿಗಾದರೂ ನೀನು ಒಳ್ಳೆಯದನ್ನು ಮಾಡಿದ್ದರೆ ಮರೆ.
2.ಯಾರಾದರೂ ನಿನಗೆ ಕೆಟ್ಟದ್ದನ್ನು ಮಾಡಿದ್ದರೆ ಅದನ್ನು ನೀನು ಮರೆ.
1.ಈ ಜಗತ್ತಿನಲ್ಲಿ ಯಾವುದೂ ಸ್ಥಿರವಾಗಿಲ್ಲ. ಕೀರ್ತಿ-ವಾರ್ತೆ, ಧನ-ಕನಕ ಎಲ್ಲವೂ ನಶ್ವರ. ಇದನ್ನು ಮರೆಯದಿರು.
2.”ಅತಿ ಸರ್ವತ್ರ ವರ್ಜಯೇತ್” ಎಂದರೆ ಆಟ-ಊಟ, ಪಾಠ-ಪ್ರವಚನ, ನೋಟ-ಮಾಟ ಎಲ್ಲದರಲ್ಲಿಯೂ ಮಿತಿ ಇರಲಿ! ಎಂದು ನುಡಿದು ಇಹಲೋಕ ತ್ಯಜಿಸಿದರು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button