ಪ್ರಮುಖ ಸುದ್ದಿ
ಯಾದಗಿರಿಃ 2 ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢ
ಯಾದಗಿರಿಃ ಜಿಲ್ಲೆಯಲ್ಲಿ ಕೊರೊನಾ ತನ್ನ ಆಟಾಟೋಪ ಮುಂದುವರೆಸಿದ್ದು, ಮತ್ತೆ ಇಂದು ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿರುವದು ದೃಢಪಟ್ಟಿದೆ.
ಮಹಾರಾಷ್ಟ್ರ ದಲ್ಲಿ ಪಾಲಕರೊಂದಿಗೆ ಇದ್ದ ಮಗು ಕಳೆದ ಕೆಲ ದಿನಗಳಿಂದೆ ಅಷ್ಟೆ ಪಾಲಕರು ಮಹಾರಾಷ್ಟ್ರ ದಿಂದ ತಮ್ಮೂರಿಗೆ ವಾಪಾಸಾಗಿದ್ದು, ಗುರುಮಠಕಲ್ ವ್ಯಾಪ್ತಿಯ ಗುಂಜನೂರ ಕ್ವಾರಂಟೈನ್ ಕೇಂದ್ರದಲ್ಲಿದ್ದರು ಎನ್ನಲಾಗಿದೆ. ನಿನ್ನೆ ಐವರಿಗೆ ಸೋಂಕು ತಗುಲಿರುವದು ಸ್ಪಷ್ಟಪಡಿಸಲಾಗಿತ್ತು.
ಇದೀಗ 2 ವರ್ಷದ ಮಗುವಿಗೂ ಪರೀಕ್ಷೆ ಮಾಡಲಾಗಿ ಸೋಂಕು ದೃಢಪಟ್ಟ ವರದಿ ಬಂದಿದೆ ಎನ್ನಲಾಗಿದೆ. ಮಗು ಸೇರಿ ಯಾದಗಿರಿ ಜಿಲ್ಲೆಯ ಸೋಂಕಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.