ಪ್ರಮುಖ ಸುದ್ದಿ
ಅಮೀತ್ ಶಾ ಹಿಂದೂನಾ ಜೈನ್ ರಾ ಸಿಎಂ ಪ್ರಶ್ನೆ
ಅಮೀತ್ ಶಾ ಗೆ ನನ್ನ ಕಂಡ್ರೆ ಭಯಃ ಸಿದ್ರಾಮಯ್ಯ
ಮೈಸೂರಃ ಬಿಜೆಪಿ ರಾಷ್ಡ್ರೀಯ ಅಧ್ಯಕ್ಷ ಅಮೀತ್ ಶಾ ಅವರು ನನ್ನನ್ನು ಅಹಿಂದೂ ಎಂದು ಜರಿಯುತ್ತಾರೆ, ಮೊದಲು ಅಮಿತ್ ಶಾ ಅವರು ತಾವು ಹಿಂದೂನಾ ಅಥವಾ ಜೈನರಾ ಎಂಬುದು ಸ್ಪಷ್ಟ ಪಡಿಸಲಿ ಎಂದು ಸಿಎಂ ಸಿದ್ರಾಮಯ್ಯ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕಂಡರೆ ಅಮೀತ್ ಶಾ ಗೆ ಭಯ ಆ ಕಾರಣಕ್ಕೆ ನಾನು ಎಲ್ಲಿ ಹೋಗ್ತಿನಿ ಅಲ್ಲಿಗೆ ನನ್ನ ಫಾಲೋ ಮಾಡ್ತಾರೆ ಎಂದು ಕುಟುಕಿದರು.
ಅಲ್ಲದೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಯಾವುದೇ ಕ್ಷೇತ್ರ ಬದಲಾವಣೆ ಮಾಡಲ್ಲ. ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.