ಪ್ರಮುಖ ಸುದ್ದಿ
ಮಠದಲ್ಲೇ ನೇಣಿಗೆ ಶರಣಾದ ಸ್ವಾಮೀಜಿ
ಹಾವೇರಿಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೇಹೊಸೂರಿನ ದಿಂಗಾಲೇಶ್ವರ ಶಾಖಾ ಮಠದ ಸ್ವಾಮೀಜಿಯಾಗಿದ್ದ ಮಹಾಲಿಂಗ ಸ್ವಾಮೀಜಿ (38) ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲ್ಗತ್ತಿ ಗ್ರಾಮದ ಮಠದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ನಡೆದಿದೆ.
ಕಳೆದ ಕೆಲವು ತಿಂಗಳಿಂದ ಮಠದಲ್ಲಿ ವಾಸವಾಗಿದ್ದ ಸ್ವಾಮೀಜಿ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತೀವ್ರ ತನಿಖೆಯಿಂದಲೇ ಆತ್ಮಹತ್ಯೆ ಕಾರಣವೇನು ಎಂಬುದು ಹೊರಬೇಕಿದೆ.