ಕೋತಿ, ಕತ್ತೆ, ಗೂಬೆ ಪ್ರೇಮಿಗಳ ಬೈಗುಳದಲ್ಲಿದೆ ಜೀವತನ
ಕತ್ತೆ ಗೂಬೆ ಬೈಗುಳದ ಹಿಂದಿದೆ ಘಮಘಮಿಸುವ ಮಮತೆ
ಕೋತಿ ಗೂಬೆ ಎಂದು ಕರೆಯುವುದರಲ್ಲಿ ಯಾವ ಸಂತಸ ಅಡಗಿದಿಯೋ ನಾನರಿಯೆ/
ನನಗಂತೂ ಇಷ್ಟವಾಗುವುದು ಅದರಲ್ಲಿ ಅಂತಹದ್ದು ಏನಿದೆಯೋ ನಾನರಿಯೆ//
ತುಂಬು ಪ್ರೀತಿಯ ಒಲವಿನ ಕೂಗಿಗೆ ಬಗೆಬಗೆಯ ಎಷ್ಟೊಂದು ಪೆದ್ದು ಹೆಸರುಗಳು/
ಮುದ್ದಾಗಿ ರಮಿಸುವ ಪರಿಯ ನಾಜೂಕು ತಂದಿದ್ದು ಮುನಿಸಿಗೆ ನಾಚಿಕೆಯೋ ನಾನರಿಯೇ//
ಜೋಡಿಗಳ ಏಕಾಂತದ ಪಿಸುಮಾತು ಕದ್ದು ಆಲಿಸಿ ಬರಬೇಕೇನೋ ಸಾವಿರ ಸಾರಿ/
ಜಾಲಾಡಿದಷ್ಟು ಮರ್ಕಟ ಉತ್ತರ ಸಿಗದ ನಗುವ ಪ್ರಶ್ನೆಗಳು ಎಷ್ಟಿದೆಯೋ ನಾನರಿಯೆ//
ಅದರದೇ ಆದ ಆದರದ ಸ್ವಾದ ಕಬ್ಬಲ್ಲಿರುವ ಸಕ್ಕರೆಯಂತೆ ಅಕ್ಕರೆಯ ರೀತಿ/
ವ್ಯಕ್ತಪಡಿಸುವ ಚೆಲುವು ಅರ್ಥೈಸಿಕೊಳ್ಳುವುದರಲ್ಲಿ ಏನಾದರೂ ಇದೀಯೋ ನಾನರಿಯೆ//
ಆತ್ಮೀಯ ಸಲುಗೆ ನಿಕಟ ಬಂಧ ತೋರುವ ತರಹ ಹಲವು ವಿಧಗಳ ಉಕ್ಕುವ ಚಿಲುಮೆ/
ಮಾಡಿದಷ್ಟು ಮಧುರ ವಿಚಿತ್ರ ನಾಮಕರಣ ಹಿತ ಕಾಳಜಿ ಹಿಂದಿದಿಯೋ ನಾನರಿಯೆ//
ನಯವಾದ ಬೈಗುಳಗಳ ಲಹರಿ ಬಸುಗೆ ಬೆರಗಿನ ರೋಮಾಂಚನ ನೆನೆದು/
ಲೇ ಕತ್ತೆ ನಿಜ ಹೆಸರೇ ಮರೆಸುವ ಸೊಗಸು ನುಡಿ ನಿನ್ನಲ್ಲಿದಿಯೋ ನಾನರಿಯೆ//
–ಬಸವರಾಜ ಕಾಸೆ
ಮು/ ಪೋ/ ದೇವಾಪೂರ
ತಾ/ ಜಿ/ ವಿಜಯಪುರ
ಪಿನ್ ಕೋಡ್ 586125
ಸಂಪರ್ಕ ಸಂಖ್ಯೆ 7829141150
Mail – pradeepbasu68@mai.-