ಪ್ರಮುಖ ಸುದ್ದಿ
ಮಲೆನಾಡು ಈಗ ಮಳೆ ನಾಡು-ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ವಿವಿ ಡೆಸ್ಕ್ಃ ಮಲೆನಾಡು ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ಶಾಲಾ ಕಾಲೇಜುಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.
ಮಲೆನಾಡು ಈಗ ಸಂಪೂರ್ಣ ಮಳೆನಾಡಾಗಿದೆ ಎನ್ನಲಾಗಿದೆ. ಕೇರಳದಲ್ಲಿ ಕ್ಯಾರೆ ಚಂಡ ಮಾರುತ ಬೀಸಿದ್ದರಿಂದ ಇನ್ನಷ್ಟು ಪಳೆ ಪ್ರಭಾವ ಜಾಸ್ತಿಯಾಗಲಿದೆ. ಹೀಗಾಗಿ ಸಮುದ್ರ ತೀರಕ್ಕೆ ಮೀನುಗಾರರು ಇಳಿಯದಂತೆ ಮುನ್ನೆಚ್ಚರಿಕೆ ಸಹ ನೀಡಲಾಗಿದೆ.