ಪ್ರಮುಖ ಸುದ್ದಿ
ಮೈಸೂರು ರಾಣಿಗೆ ಗಂಡು ಮಗು ಆಯ್ತಂತೆ!
ಬೆಂಗಳೂರು: ಮೈಸೂರು ಅರಸರ ವಂಶಸ್ಥರು ಕೊನೆಗೂ ಆಲಮೇಲಮ್ಮನ ಶಾಪದಿಂದ ವಿಮೋಚನೆಗೊಂಡ್ರಂತೆ ಕಣೋ. ಯದುವಂಶಕ್ಕೆ ಹೊಸ ಅತಿಥಿ ಬಂದಿದ್ದಾನಂತೆ ಕಣೋ. ಮೈಸೂರು ರಾಣಿಗೆ ಗಂಡು ಮಗು ಜನಿಸಿದೆಯಂತೆ ಕಣೆ. ಹೌದು. ಎಲ್ಲೆಲ್ಲೂ ಇವೇ ಮಾತುಗಳು ಹರಿದಾಡುತ್ತಿವೆ. ಮೈಸೂರಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದ ತುಂಬ ಮೈಸೂರು ರಾಜಮನೆತನದಲ್ಲಿ ಜನಿಸಿದ ರಾಜನದ್ದೇ ಮಾತು!
ಹೌದು, ಬೆಂಗಳೂರಿನ ಇಂದಿರಾ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಾಜವಂಶಸ್ಥರಾದ ಯದುವೀರ್ ಅರಸ್ ಅವರ ಪತ್ನಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ, ರಾಜಮನೆತನದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ. ಕರ್ನಾಟಕದ ಕುವರನನ್ನು ನೋಡಲು ರಾಜ್ಯದ ಜನರೂ ಕುತೂಹಲದಿಂದ ಕಾಯುತ್ತಿದ್ದಾರೆ.