ಕಥೆ

ಅಸ್ವಸ್ಥರು ಯಾರು? ರೋಗಿಯೋ? ವೈದ್ಯರೋ?

ಅಸ್ವಸ್ಥರು ಯಾರು? ರೋಗಿಯೋ? ವೈದ್ಯರೋ?

ಇದೆಂತಹ ಪ್ರಶ್ನೆ? ಅಸ್ವಸ್ಥರಾಗಿರುತ್ತಾರೆಯೇ ಹೊರತು, ವೈದ್ಯರು ಅಸ್ವಸ್ಥರು ಯಾಕಾಗುತ್ತಾರೆ ಎನ್ನುವರು ಓದಬೇಕಾದ ಅರ್ಥಪೂರ್ಣ ಘಟನೆಯೊಂದು ಇಲ್ಲಿದೆ. ಗುಜರಾತಿನ ವ್ಯಾಪಾರಿಯೊಬ್ಬರು ಶೇರು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ವ್ಯಾಪಾರ ಮಾಡುತ್ತಿದ್ದರು.

ಒಮ್ಮೆ ಮಾರುಕಟ್ಟೆಯಲ್ಲಿ ತೀವ್ರ ಏರುಪೇರಾಗಿ ವ್ಯಾಪಾರಿಯು ಅಪಾರವಾದ ನಷ್ಟಕ್ಕೊಳಗಾದರು. ವ್ಯಾಪಾರಿಯು ಖಿನ್ನತೆಗೊಳಗಾದರಂತೆ. ಪ್ರತಿನಿತ್ಯ ಬರುತ್ತಿದ್ದ ನಷ್ಟದ ಕೆಟ್ಟಸುದ್ದಿಗಳನ್ನು ಕೇಳಿಕೇಳಿ ಅವರ ಆತ್ಮವಿಶ್ವಾಸ ಕುಸಿದುಬಿತ್ತು. ಅವರು ದಿವಾಳಿಯಾಗಿರಲಿಲ್ಲ.

ಆದರೆ ದಿಗ್ಭ್ರಾಂತರಾಗಿದ್ದರು. ಈಗ ಅವರಲ್ಲಿ ಇನ್ನೂ ಇದ್ದ ನಗದು ಬಂಡವಾಳವನ್ನೇನು ಮಾಡಬೇಕು? ಇರುವ ಶೇರುಗಳನ್ನು ಮಾರುವುದೋ, ಹೆಚ್ಚಾಗುವವರೆಗೆ ಕಾಯುವುದೋ ಎಂಬ ತೀರ್ಮಾನಗಳನ್ನು ತೆಗೆದುಕೊಳ್ಳುವುದೂ ಅವರಿಗೆ ಸಾಧ್ಯವಾುತ್ತಿರಲಿಲ್ಲ. ಸುಮ್ಮನೆ ಮಂಕು ಬಡಿದವರಂತೆ ಕುಳಿತಿರುತ್ತಿದ್ದರು. ಅವರ ಕೆಲಸಗಾರರು ಏನು ಮಾಡಬೇಕೆಂದು ಕೇಳಿದರೆ, ಏನೂ ಹೇಳದೆ ಸುಮ್ಮನೆ ಕುಳಿತುಬಿಡುತ್ತಿದ್ದರು.

ಕೆಲವರು ಅಲ್ಲಿ ಶೇರು ಮಾರುಕಟ್ಟೆ ಕುಸಿದಿದೆ, ಇಲ್ಲಿ ಇವರ ಮನೋಸ್ಥೈರ್ಯ ಕುಸಿದಿದೆ, ಅಲ್ಲೂ ಡಿಪ್ರೆಷನ್, ಇಲ್ಲೂ ಡಿಪ್ರೆಷನ್ ಎನ್ನುತ್ತಿದ್ದರು. ಹೀಗಾಗಿ ವ್ಯವಹಾರದಲ್ಲಿ ಅನಿಶ್ಚಿತತೆ ತಲೆದೋರಿತು. ಎಲ್ಲವೂ ಸ್ಥಗಿತಗೊಂಡಿತ್ತು. ಆಗ ಅವರ ಕುಟುಂಬದವರು ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಅವರನ್ನು ಕೂಡಿಹಾಕಿದ್ದರು.

ನುರಿತ ವೈದ್ಯರು ಪ್ರತಿದಿನ ಅವರಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಬಗ್ಗೆ, ತೀರ್ಮಾನಗನ್ನು ತೆಗೆದುಕೊಳ್ಳುವ ಬಗ್ಗೆ ತಿಳಿಹೇಳುತ್ತಿದ್ದರು. ಕೆಲವು ತಿಂಗಳಾಗುವುದರಲ್ಲಿ ಅವರು ಬದಲಾದರು. ಕಾಂತಿಯುಕ್ತ ಕಣ್ಣುಗಳು, ತೇಜಸ್ವೀ ಮುಖ ಮತ್ತು ಆತ್ಮವಿಶ್ವಾಸದಿಂದ ನಡೆದಾಡುವ ಶೈಲಿ ರೂಢಿಸಿಕೊಂಡಿದ್ದರು.

ಆಗ ಅವರನ್ನು ಕೂಡಿಹಾಕುತ್ತಿದ್ದ ವಾರ್ಡಿನಿಂದ ಹೊರಗೆ ಕೆತಂದ ವೈದ್ಯರು ನೀವೀಗ ಸಂಪೂರ್ಣ ಗುಣಮುಖರಾಗಿದ್ದೀರಿ. ನೀವೀಗ ಹೊರಹೋಗಿ ನಿಮ್ಮ ವ್ಯವಹಾರವನ್ನು ಪುನರಾರಂಭಿಸಬಹುದು.

ನೀವೀಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಬಹುದು. ಅಥವಾ ನಾಳೆಯವರೆಗೂ ಕಾಯಬಹುದು.

ನಿಮ್ಮ ಬಂದು ನಿಮ್ಮನ್ನು ಕರೆದೊಯ್ಯುವಂತೆ ಹೇಳಬಹುದು. ಅಥವಾ ನೀವೇ ಟ್ಯಾಕ್ಸಿಯಲ್ಲಿ ಹೋಗಬಹುದು. ಅಥವಾ ಆಸ್ಪತ್ರೆಯ ಆಂಬುಲೆನ್‌ಸ್ ವಾಹನದಲ್ಲಿ ಹೋಗಬಹುದು.

ನೀವಿಲ್ಲಿಗೆ ಬಂದಾಗ ಹಾಕಿಕೊಂಡು ಬಂದಿದ್ದ ಹಳೆಯ ಬಟ್ಟೆಗಳನ್ನೇ ಧರಿಸಿ ಹೋಗಬಹುದು, ಅಥವಾ ಹೊಸ ಬಟ್ಟೆಗಳನ್ನು ತರಿಸಿ, ಧರಿಸಿಕೊಂಡು ಹೋಗಬಹುದು.

ಈಗ ಊಟದ ಸಮಯ. ಆಸ್ಪತ್ರೆಯ ಊಟವನ್ನೇ ತಿಂದುಹೋಗಬಹುದು. ಬೇಡದಿದ್ದರೆ, ಮನೆಗೆ ಹೋಗಿ ಮನೆಯ ಊಟವನ್ನು ಮಾಡಬಹುದು ಎಂದೆಲ್ಲಾ ಹೇಳುತ್ತಲೇ ಹೋದರು. ಆಗ ವ್ಯಾಪಾರಿಯು ವೈದ್ಯರ ಕೊರಳು ಪಟ್ಟಿಯನ್ನು ಅವರನ್ನು ವಾರ್ಡಿನೊಳಕ್ಕೆ ದೂಡಿದರು. ಹೊರಗಡೆಯಿಂದ ಬೀಗ ಹಾಕಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿಲ್ಲವೆಂಬ ಕಾರಣಕ್ಕಾಗಿ ನನ್ನನ್ನು ಚಿಕಿತ್ಸೆಗಾಗಿ ಸೇರಿಸಿದ್ದರು. ನಾನೀಗ ಖಚಿತ ತೀರ್ಮಾನ ತೆಗೆದುಕೊಳ್ಳುವ ಶಕ್ತಿ ಬೆಳೆಸಿಕೊಂಡಿದ್ದೇನೆ.

ನಾನು ಹಳೆಯ ಸೂಟುಬೂಟು ಧರಿಸಿ, ಟ್ಯಾಕ್ಸಿಯಲ್ಲಿ, ಈಗಲೇ ಮನೆಗೆ ಹೋಗಿ ಊಟ ಮಾಡುತ್ತೇನೆ. ಆದರೆ ನೀವು ಯಾವುದನ್ನೂ ಖಚಿತವಾಗಿ ತಿಳಿಸದೇ, ಬೇಕಿದ್ದರೆ ಅದು ಮಾಡಿ, ಬೇಡದಿದ್ದರೆ ಇದು ಮಾಡಿ ಎನ್ನುತ್ತ ಏನೇನೋ ಹೇಳುತ್ತಿರುವ ನೀವೇ ಅಸ್ವಸ್ಥರಾಗಿದ್ದೀರಿ! ಖಚಿತ ತೀರ್ಮಾನಗಳನ್ನು ತೆಗೆದುಕೊಳ್ಳುವ ಶಕ್ತಿ ನಿಮಗಿದ್ದಂತಿಲ್ಲ. ಬೆಳೆಸಿಕೊಂಡರೆ, ನಿಮ್ಮನ್ನು ಹೊರಕ್ಕೆ ಬಿಡುತ್ತಾರೆ ಎನ್ನುತ್ತ ಹೊರಟುಹೋದರಂತೆ.

ಬದುಕಿನಲ್ಲಿ ಅನೇಕ ಬಾರಿ ಕಾರ್ಯನಿರ್ವಹಣೆಯ ಹತ್ತಾರು ಮಾರ್ಗಗಳು ಮುಂದಿರುತ್ತವೆ. ಅಂತಹ ಮಾರ್ಗಗಳ ಪಟ್ಟಿಯನ್ನು ಮಾಡಿ, ಅನುಭವಸ್ಥರ ಸಲಹೆ ಸೂಚನೆಗಳನ್ನು ಪಡೆದು, ಸ್ವಂತ ವಿವೇಚನೆಯನ್ನು ಬಳಸಿ, ಸಮಯ ನಿಗದಿಪಡಿಸಿಕೊಂಡು ಕಾರ್ಯಮಗ್ನರಾಗುವವರು ಯಶಸ್ವಿಯಾಗುತ್ತಾರೆ. ಇದು ಸರಿಯೋ, ಅದು ಸರಿಯೋ ಎಂದು ಯೋಚಿಸುತ್ತಲೇ ಸುಮ್ಮನೆ ಕುಳಿತು ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾಗದವರು ಡಿಪ್ರೆಷನ್ ಎಂದು ಕರೆಸಿಕೊಳ್ಳುವ ಅಸ್ವಸ್ಥತೆಗೆ ಗುರಿಯಾಗುತ್ತಾರೆ!

ಈಗ ಮೇಲಿನ ಘಟನೆಯಲ್ಲಿ ಅಸ್ವಸ್ಥರು ರೋಗಿಯೋ, ಎಂಬುದನ್ನು ತೀರ್ಮಾನಿಸಬೇಕಾದವರು ನಾವು! ಅದಾಗದಿದ್ದರೆ, ನಾವೂ ನಮ್ಮ ಬಗ್ಗೆ ಯೋಚಿಸಬೇಕಲ್ಲವೇ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button