ಸೈನಿಕ, ಓರ್ವ ಸುಂದರಿ, ಉಳಿದವರ ಪ್ರತಿಕ್ರಿಯೆ ಇದನ್ನೋದಿ
ನಿಮ್ಮೆಲ್ಲರ ಪ್ರತಿಕ್ರಿಯೆ ಕಂಡು ಹೆಮ್ಮೆ ಎನಿಸಿತು..ಸೈನಿಕ
ಏರ್ ಹೋಸ್ಟೇಸ್‌ರನ್ನು ಕರೆದು ಫ್ಲೈಟ್‌ನಲ್ಲಿ ಸೀಟು ಬದಲಾಯಿಸು ಎಂದು ಕೇಳಿದಳು ಒಬ್ಬ ಮಹಿಳೆ.. ಆದರೆ ಆಕೆ ಏನು ಮಾಡಿದಳು ಗೊತ್ತಾ..?
ತುಂಬಿದ್ದ ವಿಮಾನದೊಳಕ್ಕೆ
ಸುಂದರವಾದ ಪ್ರಯಾಣಿಕಳೊಬ್ಬಳು ಪ್ರವೇಶಿಸಿ
ತನ್ನ ಸೀಟಿಗಾಗಿ ಹುಡುಕಾಡಿದಳು.
ಎರಡೂ ಕೈಗಳು ಇಲ್ಲದ ಒಬ್ಬ ವ್ಯಕ್ತಿಯ ಪಕ್ಕ
ತನ್ನ ಸೀಟು ಇರುವುದನ್ನು ನೋಡಿ,
ಆತನ ಪಕ್ಕದಲ್ಲಿ ಕೂರಲು ಯೋಚಿಸುತ್ತಿದ್ದಳು!!
ಆ “ಸುಂದರವಾದ ಮಹಿಳೆ” ಏರ್ ಹೋಸ್ಟೆಸ್‍ಳನ್ನು ಕರೆದಳು ..
“ನಾನು ಇಲ್ಲಿ ಕೂತು
ಸುಖವಾಗಿ ಪ್ರಯಾಣ ಮಾಡಲು ಸಾಧ್ಯವಾಗಲ್ಲ
ನನ್ನ ಸೀಟನ್ನು ಬದಲಾಯಿಸುತ್ತೀರಾ?” ಎಂದು ಕೇಳಿದಳು.
“ಮೇಡಂ! ದಯವಿಟ್ಟು ಕಾರಣ ತಿಳಿದುಕೊಳ್ಳಬಹುದಾ?”
ಕೇಳಿದಳು ಏರ್ ಹೋಸ್ಟೆಸ್.
ಇಂತಹವರೆಂದರೆ ನನಗೆ ಅಸಹ್ಯ.
ಇವರ ಪಕ್ಕ ಕುಳಿತು ಪ್ರಯಾಣಿಸುವುದು
ನನಗಿಷ್ಟವಿಲ್ಲ” ಎಂದಳು ಆ ಸುಂದರ ಮಹಿಳೆ.
ನೋಡಲು ಸುಂದರವಾಗಿ – ಅಂದವಾಗಿ-
ಸಭ್ಯಳಂತೆ ಕಾಣಿಸುತ್ತಿದ್ದರೂ ಆಕೆ ಬಾಯಿಂದ
ಬಂದ ಈ ಮಾತನ್ನು ಕೇಳಿ ಏರ್ ಹೋಸ್ಟೆಸ್
ತುಂಬಾ ಚಕಿತಗೊಂಡಳು.
ಆ ಸುಂದರವಾದ ಮಹಿಳೆ ಮತ್ತೆ ತನಗೆ “ಈ ಸೀಟು ಬೇಡ ಬೇರೆ ಸೀಟು ಬೇಕೆಂದು ಡಿಮ್ಯಾಂಡ್ ಮಾಡಿದಳು.”
“ಸ್ವಲ್ಪ ಹೊತ್ತು ಸಂಯಮದಿಂದ ಇರಿ. ನಾನು ನಿಮ್ಮ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ” ಎಂದು ಏರ್ ಹೋಸ್ಟೆಸ್ ಎಲ್ಲಿಯಾದರೂ ಸೀಟು ಖಾಲಿ ಇದೆಯೇನೋ ಎಂದು ಹುಡುಕಿದಳು.
ಆದರೆ ಎಲ್ಲೂ ಸಿಗಲಿಲ್ಲ. ಆ ಏರ್ ಹೋಸ್ಟೆಸ್
ಮತ್ತೆ ಬಂದು “ಮೇಡಂ! ಈ ಎಕನಾಮಿ ಕ್ಲಾಸ್‍ನಲ್ಲಿ
ಸೀಟುಗಳೆಲ್ಲಾ ಸಂಪೂರ್ಣ ತುಂಬಿಹೋಗಿವೆ
ಆದರೂ ನಮ್ಮ ವಿಮಾನದಲ್ಲಿ ಪ್ರಯಾಣಿಸುವ ವ್ಯಕ್ತಿಗಳು ಕಂಫರ್ಟ್‍ಗಾಗಿ ಸಂಪೂರ್ಣವಾಗಿ ಪ್ರಯತ್ನಿಸುವ ಪಾಲಸಿ ನಮ್ಮದು.
ಕ್ಯಾಪ್ಟನ್ ಜತೆಗೆ ಮಾತನಾಡಿ ಬಂದು ಹೇಳುತ್ತೇನೆ
ಸ್ವಲ್ಪ ತಾಳ್ಮೆಯಿಂದ ಇರಿ.”ಎಂದು ಕ್ಯಾಪ್ಟನ್ ಬಳಿಗೆ ಹೋದಳು.
ಕೆಲವು ಕ್ಷಣಗಳ ಬಳಿಕ ಮತ್ತೆ ಬಂದು
“ಮೇಡಂ! ನಿಮಗುಂಟಾದ ಅಸೌಖರ್ಯಕ್ಕೆ ಚಿಂತಿತರಾಗಿದ್ದೇವೆ. ಈ ವಿಮಾನದ ಫಸ್ಟ್ ಕ್ಲಾಸ್‌ನಲ್ಲಿ
ಒಂದೇ ಒಂದು ಸೀಟು ಖಾಲಿ ಇದೆ
ನಮ್ಮವರ ಜತೆ ಮಾತನಾಡಿ ಒಂದು ಅಸಾಮಾನ್ಯ
ನಿರ್ಧಾರ ತೆಗೆದುಕೊಂಡೆವು. ಎಕನಾಮಿ ಕ್ಲಾಸ್‌ನಲ್ಲಿನ
ವ್ಯಕ್ತಿಯನ್ನು ಫಸ್ಟ್ ಕ್ಲಾಸ್‌ಗೆ ಕಳುಹಿಸುತ್ತಿರುವುದು
ನಮ್ಮ ಕಂಪೆನಿ ಇತಿಹಾಸದಲ್ಲೇ ಮೊದಲು..
ಆ ಸುಂದರವಾದ ಮಹಿಳೆ ಖುಷಿಯಾಗಿ ಏನೋ
ಹೇಳುವ ಹೊತ್ತಿಗೆ… ಏರ್ ಹೋಸ್ಟೆಸ್
ಆಕೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಂದಿಗೆ..!
ಸಾರ್! ದಯವಿಟ್ಟು ಎಕನಾಮಿ ಕ್ಲಾಸ್ ನಿಂದ
ಫಸ್ಟ್ ಕ್ಲಾಸ್ ಒಳಗೆ ಬರುತ್ತೀರಾ?
ಸಂಸ್ಕಾರ ಗೊತ್ತಿಲ್ಲದ ವ್ಯಕ್ತಿ ಪಕ್ಕದಲ್ಲಿ ಕುಳಿತು
ಪ್ರಯಾಣಿಸುವ ದುರದೃಷ್ಟವನ್ನು ನಾವು
ನಿಮಗೆ ತಪ್ಪಿಸಬೇಕೆಂದಿದ್ದೇವೆ.” ಎಂದಳು.
ಏರ್ ಹೋಸ್ಟೆಸ್ ಮಾತುಗಳನ್ನು ಕೇಳಿದ ಉಳಿದ
ಪ್ರಯಾಣಿಕರೆಲ್ಲರೂ ಒಮ್ಮೆಲೆ.. ಚಪ್ಪಾಳೆ ತಟ್ಟುತ್ತಾ
ಆ ನಿರ್ಧಾರವನ್ನು ಸ್ವಾಗತಿಸಿದರು. ಆ ಸುಂದರವಾದ ಮಹಿಳೆ ಮುಖ ಬಾಡಿ ಹೋಯಿತು.
ಆಗ ಆ ವ್ಯಕ್ತಿ ಎದ್ದು ನಿಂತು..ನಾನೊಬ್ಬ ಮಾಜಿ ಸೈನಿಕ. ಕಾಶ್ಮೀರ್ ಬಾರ್ಡರ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ನನ್ನ ಎರಡೂ ಕೈಗಳನ್ನು ಕಳೆದುಕೊಂಡೆ. ಮೊದಲು ಈಕೆಯ ಮಾತುಗಳನ್ನು ಕೇಳಿದ ಬಳಿಕ ಇಂತಹವರಿಗಾಗಿಯೇ ನಮ್ಮ ಜೀವನವನ್ನು ಪಣವಾಗಿ ಇಟ್ಟಿದ್ದು’ ಎನ್ನಿಸಿತು.
ಆದರೆ, ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿದ ಬಳಿಕ ದೇಶಕ್ಕಾಗಿ ನನ್ನ ಎರಡು ಕೈಗಳು ಕಳೆದುಕೊಂಡಿದ್ದಕ್ಕೆ ಹೆಮ್ಮೆ ಪಡುತ್ತಿದ್ದೇನೆ”
ಎಂದು ಪ್ರಯಾಣಿಕರ ಚಪ್ಪಾಳೆ ನಡುವೆ
ಫಸ್ಟ್ ಕ್ಲಾಸ್‌ನೊಳಕ್ಕೆ ಹೊರಟು ಹೋದರು
ಆ ಸುಂದರವಾದ ಮಹಿಳೆ ಎರಡು ಸೀಟ್‌ಗಳಲ್ಲಿ
ಒಬ್ಬಳೇ ನಾಚಿಕೆಯಿಂದ ಕುಸಿದು ಬಿದ್ದಳು…
ಸೌಂದರ್ಯ ಎಂದರೆ ಕಣ್ಣಿಗೆ ಕಾಣಿಸುವ
ಮುಖದಲ್ಲೋ, ಮೆನುವಿನಲ್ಲೋ ಅಲ್ಲ…
ಉನ್ನತವಾದ ಆಲೋಚನೆಗಳು ಉನ್ನತವಾದ
ಭಾವನೆಗಳನ್ನು ಇರುವ ಒಳ್ಳೆಯ ಮನಸ್ಸಿನಲ್ಲಿಇರುತ್ತದೆ….
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882