ಶ್ರೀ ಬಲಭೀಮೇಶ್ವರರ ದರ್ಶನ ಪಡೆದ ಯಡಿಯೂರಪ್ಪ
ಪುರಾಣ ಪ್ರಸಿದ್ಧ ಬಲಭೀಮನ ದರ್ಶನ ಪಡೆದ ಯಡಿಯೂರಪ್ಪ
ಬಿಜೆಪಿಯ ಮಾಜಿ, ಹಾಲಿ ಶಾಸಕರ ಸಾಥ್
ಯಾದಗಿರಿ, ಶಹಾಪುರ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಕಲ್ಬುರ್ಗಿ, ಯಾದಗಿರಿ, ವಿಜಯಪುರ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಶುಕ್ರವಾರ ಯಾದಗಿರಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಸಮೀಪದ ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ತಂಗಿದ್ದರು.
ಶನಿವಾರ ಬೆಳಗ್ಗೆ ಸಗರನಾಡಿನ ಆರಾಧ್ಯ ದೇವ ಪುರಾಣ ಪ್ರಸಿದ್ಧವಾದ ಸುಕ್ಷೇತ್ರ ಶ್ರೀಬಲಭೀಮೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಶ್ರೀದೇವಸ್ಥಾನದ ಅರ್ಚಕರಿಂದ ವಿಶೇಷ ಪೂಜೆ ಜರುಗಿತು. ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಬಿ.ಎಸ್.ವೈ ಅವರಿಗೆ ಗೌರವ ಸಮರ್ಪಣೆ ಜರುಗಿತು. ದೇವಸ್ಥಾನದ ಆವರಣದಲ್ಲಿನ ನವಗ್ರಹಗಳ ಸುತ್ತಲೂ ಪ್ರದಕ್ಷಣೆ ಹಾಕಿ ಅವರು ಪ್ರಾರ್ಥಿಸಿದರು. ಅಲ್ಲದೆ ಸ್ಥಳೀಯರಿಂದ ದೇವಸ್ಥಾನದ ಕಿರು ಚರಿತ್ರೆಯ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ, ಸೇಡಂ ಶಾಸಕ ರಾಜಕುಮಾರ ತೇಲ್ಕರ್ ಸೇರಿದಂತೆ ವೆಂಕಟರೆಡ್ಡಿ ಮುದ್ನಾಳ, ದತ್ತಾತ್ರೇಯ ಪಾಟೀಲ ರೇವೂರು, ಬಸವರಾಜ ಮತ್ತಿಮಡು ಮಾಜಿ ಶಾಸಕ ಶಶೀಲ ನಮೋಶಿ, ದೊಡ್ಡಪ್ಪಗೌಡ ಪಾಟೀಲ ನರಬೋಳಿ, ಪ್ರಮುಖರಾದ ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಚಂದ್ರಶೇಖರ ಮಾಗನೂರ, ಡಾ.ಚಂದ್ರಶೇಖರ ಸುಬೇದಾರ, ಅಡಿವೆಪ್ಪ ಜಾಕಾ, ಮಲ್ಲಿಕಾರ್ಜುನ ಚಿಲ್ಲಾಳ, ರಾಜುಗೌಡ ಉಕ್ಕಿನಾಳ ಇತರರಿದ್ದರು.