ರಾಜನಿಗೆ ತನ್ನ ಶವದ ಮೆರವಣಿಗೆ ಕಾಣುವ ಬಯಕೆ
ದಿನಕ್ಕೊಂದು ಕಥೆ
ಭಾವನೆಗಳೊಡನೆ ಆಟವಾಡಲು ಹೋದ ಕೊನೆಗೆ ಹೆಣವಾದ ಮೂರ್ಖ ರಾಜ
ಒಂದು ರಾಜ್ಯದಲ್ಲಿ ಮೂರ್ಖ ರಾಜನಿದ್ದ. ಅವನು ಮನ ಬಂದಂತೆ ಆಡಳಿತ ನಡೆಸುತ್ತಿದ. ಆ ರಾಜ್ಯದ ಮಂತ್ರಿ, ಸೇನಾಧಿಕಾರಿಗಳು ದಕ್ಷರಾದುದರಿಂದಲೇ ರಾಜ್ಯಭಾರವೇನೋ ನಡೆಯುತ್ತಲಿತ್ತು.
ಒಂದು ದಿನ ಆತ ಸತ್ತ ವ್ಯಕ್ತಿಯ ಅಂತಿಮ ಯಾತ್ರೆಯನ್ನು ಕಂಡನು. ಸತ್ತಾಗ ಎಲ್ಲರೂ ಯಾಕೆ ಅಳುತ್ತಾರೆ ಎಂದೇ ಆತನಿಗೆ ತಿಳಿಯಲಿಲ್ಲ. ಒಮ್ಮೆಲೇ ಒಂದು ವಿಚಿತ್ರ ಯೋಚನೆಯೇ ಅವನಿಗೆ ಹೊಳೆಯಿತು. “ನಾನು ಸತ್ತಾಗ ಜನರು ಹೇಗೆ ವರ್ತಿಸುತ್ತಾರೆ ? ಎಷ್ಟು ಅಳುತ್ತಾರೆ ? ಇದನ್ನೆಲ್ಲ ಕಾಣಲೇಬೇಕೆಂಬ ಬಯಕೆ ಮೂಡಿತವನಿಗೆ.
ತಕ್ಷಣ ಮಂತ್ರಿಗಳನ್ನು ಕರೆಸಿ “ನಾನು ಸತ್ತಿದ್ದೇನೆಂದು ಡಂಗುರ ಹೊಡೆಸಿಬಿಡಿ. ನನ್ನ ಶವಯಾತ್ರೆಯನ್ನು ನನಗೆ ಕಣ್ಣಾರೆ ನೋಡಲೇಬೇಕು” ಎಂದನು. ಮಂತ್ರಿಗಳೆಲ್ಲ ದಂಗಾದರು.
ಮಂತ್ರಿಗಳು ಗತ್ಯಂತರವಿಲ್ಲದೆ ದಿಂಬಿನ ಮೇಲೆ ಬಟ್ಟೆ ಹೊದಿಸಿ ಶವ ಮಾಡಿ ಶವಯಾತ್ರೆಗೆ ತಯಾರಿ ನಡೆಸಿದರು. ಮುದುಕನ ತರಹ ಮಾರುವೇಷದಲ್ಲಿ ಈ ಮೂರ್ಖ ರಾಜನೂ ಜತೆಗೇನೇ ಹೋದ. ಹೆಂಗಸರು, ಗಂಡಸರು, ಮಕ್ಕಳು ಎಲ್ಲರೂ ಶವದ ಪಲ್ಲಕಿ ಬಳಿ ಬಂದು ಎದೆಬಡಿದುಕೊಂಡು ಅಳುತ್ತಿದ್ದರು. ಅವರ ಕಣ್ಣೀರು ಕಂಡು ಮೂರ್ಖರಾಜನಿಗೇ ಅತೀವ ದುಃಖವಾಯಿತು. ಅವನೂ ಅಳಲಾರಂಭಿಸಿದ.
ಪಲ್ಲಕಿಯನ್ನು ಕೆಳಗಿಳಿಸಿ ಶವಕ್ಕೆ ಬೆಂಕಿಯನ್ನು ಕೊಡಲಾಯಿತು. ದುಃಖ, ಆವೇಶ ತಾಳಲಾರದೆ, ಹಿಂದೆ ಮುಂದೆ ಯೋಚಿಸದೆ, ಮೂರ್ಖ ರಾಜನೂ ಬೆಂಕಿಗೆ ಹಾರಿಯೇ ಬಿಟ್ಟ. ಸೈನಿಕರು ಎಷ್ಟು ಪ್ರಯತ್ನಿಸಿದರೂ ಅವನನ್ನು ತಡೆಯಲಾಗಲಿಲ್ಲ. ನಾಟಕದ ಶವ ಎಂಬುದು ನಿಜಕ್ಕೂ ಶವ ಆಯಿತು.
ನೀತಿ :– ಸ್ವಪ್ರತಿಷ್ಠೆಯಿಂದ ಮೆರೆಯಬಾರದು. ಮೂರ್ಖ ರಾಜ ಜನರನ್ನು ಮೆಚ್ಚಿಸಲು ಶವವಾದನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.