ಪ್ರಮುಖ ಸುದ್ದಿ
ಬಹುಭಾಷಾ ನಟ ಪ್ರಕಾಶ್ ರೈ ಸಂಸದ ಅಥವಾ ಶಾಸಕರಾಗ್ತಾರಂತೆ?
ಬಹುಭಾಷಾ ನಟ ಪ್ರಕಾಶ್ ರೈ ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿವರೆಗೆ, ಸಂಸದ ಪ್ರತಾಪ ಸಿಂಹ ಅವರಿಂದ ಹಿಡಿದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆವರೆಗೆ ಕಿಡಿ ಕಾರುವ ಮೂಲಕ ದೊಡ್ಡ ಸಮರವನ್ನೇ ಸಾರಿದ್ದಾರೆ. ಆ ಮೂಲಕ ಪ್ರಗತಿಪರರ ಮೆಚ್ಚುಗೆಗೆ ಪಾತ್ರರಾಗಿದ್ದರೆ, ಬಲಪಂಥೀಯರ ಟೀಕೆಗೆ ಗುರಿಯಾಗಿದ್ದಾರೆ.
ಇತ್ತೀಚೆಗಷ್ಟೇ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ನಡೆದ ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸಿದ್ದ ನಟ ಪ್ರಕಾಶ್ ರೈ ಇಂದು ಕರಾವಳಿ ಉತ್ಸವವನ್ನು ಉದ್ಘಾಟಿಸಿದ್ದಾರೆ. ಕರಾವಳಿ ಉತ್ಸವದಲ್ಲೂ ಸಹ ಪ್ರತಾಪ ಸಿಂಹ, ಅನಂತ ಕುಮಾರ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಯು.ಟಿ.ಖಾದರ್ ಮಾತನಾಡಿ ನಟ ಪ್ರಕಾಶ್ ರೈ ಮಂಗಳೂರಿಗೆ ಬಂದಾಗೆಲ್ಲಾ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಪರಿಣಾಮ ಅವರು ಮುಂದಿನ ದಿನಗಳಲ್ಲಿ ಸಂಸದ ಅಥವಾ ಶಾಸಕ ಆಗೋದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆಂದು ತಿಳಿದು ಬಂದಿದೆ.