ಪ್ರಮುಖ ಸುದ್ದಿ
ಶಾಸಕ ಗುಂಡುರಾವ್ ಕುಟುಂಬ ಕ್ವಾರಂಟೈನ್ ಯಾಕೆ ಗೊತ್ತೆ.?
ಶಾಸಕ ಗುಂಡುರಾವ್ ಕುಟುಂಬ ಕ್ವಾರಂಟೈನ್ ಯಾಕೆ ಗೊತ್ತೆ.?
ಬೆಂಗಳೂರಃ ಶಾಸಕ ದಿನೇಶ ಗುಂಡುರಾವ್ ಅವರಿಗೆ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಒಬ್ಬರಿಗೆ ಕೊರನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಶಾಸಕ ಗುಂಡುರಾವ್ ಕುಟುಂಬ ಕೋವಿಡ್ ಟೆಸ್ಟಿಂಗ್ ಗೆ ಒಳಗಾಗಿದ್ದು, ಹೋಂಕ್ವಾರಂಟೈನ್ ಆಗಿರುವ ಕುರಿತು ಸ್ವತಃ ಶಾಸಕ ದಿನೇಶ ಅವರು ಟ್ವಿಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ನಿಗದಿತ ಅವಧಿವರೆಗೆ ಮನೆಯ ಸಂಪರ್ಕ ತಡೆಯನ್ನು ಹೊಂದಿರುತ್ತೇವೆ. ನಮ್ಮಲ್ಲಿ ಯಾರೂ ಯಾವುದೇ ರೋಗ ಲಕ್ಷಣಗಳು ತೋರುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.