ಪ್ರಮುಖ ಸುದ್ದಿ
ಶೀಘ್ರದಲ್ಲಿ ಆಸ್ಪತ್ರೆಗಳಲ್ಲಿ ವಾಸ್ತವ್ಯ- ಶ್ರೀರಾಮುಲು
ಶೀಘ್ರದಲ್ಲಿ ಆಸ್ಪತ್ರೆಗಳಲ್ಲಿ ವಾಸ್ತವ್ಯಃ ಶ್ರೀರಾಮುಲು
ಬಳ್ಳಾರಿಃ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳ ವಾಸ್ತವ್ಯ ಮಾಡುವ ಮೂಲಕ ಅಲ್ಲಿನ ವ್ಯವಸ್ಥೆ ಸಮಸ್ಯೆ ಅರಿತು ಸುಧಾರಣೆಗೆ 15 ದಿನಗಳಕಾಲ ಆಸ್ಪತ್ರೆ ಅಧಿಕಾರಿಗಳಿಗೆ ಗಡುವು ನೀಡುವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಮೊದಲು ಬೆಂಗಳೂರಿನ ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುವೆ. ನಂತರ ರಾಜ್ಯದ ವಿವಿದ ಆಸ್ಪತ್ರೆಗಳಲ್ಲಿ ವಾಸ್ತವ್ಯಮಾಡಿ ವಾಸ್ತವಿಕ ಸ್ಥಿತಿ ಅರಿತು ಸರಿ ಪಡಿಸಿಕೊಳ್ಳಲು ಸೂಚಿಸುವೆ.
ಜನರ ಕಲ್ಯಾಣಕ್ಕಾಗಿ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಲು ತಿಳಿಸುವೆ ಎಂದು ಅವರು ತಮ್ಮಮನದಾಳವನ್ನು ವ್ಯಕ್ತ ಪಡಿಸಿದ್ದಾರೆ.