ಪ್ರಮುಖ ಸುದ್ದಿ
ವಿಶ್ವಾಸ ಮತ ಯಾಚನೆ ಮುಂದೂಡಿಕೆ ವಿಚಾರ : ಅಡ್ವಕೇಟ್ ಜನರಲ್ ಜತೆ ಸ್ಪೀಕರ್ ಚರ್ಚೆ
ಬೆಂಗಳೂರು: ವಿಪ್ ಜಾರಿ ಪ್ರಕರಣ ಇತ್ಯರ್ಥದ ಬಳಿಕ ವಿಶ್ವಾಸ ಮತ ಯಾಚನೆ ಆಗಬೇಕು. ಅಲ್ಲಿವರೆಗೆ ವಿಶ್ವಾಸ ಮತ ಯಾಚನೆ ಮುಂದೂಡಬೇಕು ಎಂದು ಮಾಜಿ ಸಿಎಂ, ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅಡ್ವಕೇಟ್ ಜನರಲ್ ಜತೆ ಚರ್ಚೆಗೆ ಸ್ಪೀಕರ್ ರಮೇಶ ಕುಮಾರ್ ಮುಂದಾಗಿದ್ದಾರೆ.
ಸಿದ್ಧರಾಮಯ್ಯ ಹೇಳಿಕೆ ಬಳಿಕ ಭೋಜನ ವಿರಾಮ ಘೊಷಿಸಿದ ಸ್ಪೀಕರ್ ರಮೇಶ ಕುಮಾರ್ ವಿಶ್ವಾಸ ಮತ ಯಾಚನೆ ಮುಂದೂಡುವ ಬಗ್ಗೆ ಅಡ್ವಕೇಟ್ ಜನರಲ್ ಜತೆ ಚರ್ಚಿಸಿ ಕಾನೂನು ಸಲಹೆ ಪಡೆಯುತ್ತೇನೆ ಎಂದಿದ್ದಾರೆ. ಹೀಗಾಗಿ, ಮದ್ಯಾನ 3 ಗಂಟೆ ಬಳಿಕ ನಡೆಯಲಿರುವ ಕಲಾಪ ತೀವ್ರ ಕುತೂಹಲ ಕೆರಳಿಸಿದೆ.