ಪ್ರಮುಖ ಸುದ್ದಿ
ಉಸ್ತುವಾರಿ ಸಚಿವರ ನೇಮಕ : ಕಲಬುರಗಿಗೆ ಕಾರಜೋಳ ಯಾದಗಿರಿಗೆ ಚೌಹಾಣ್!
ಬೆಂಗಳೂರು : ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದ್ದಾರೆ. ಬೆಂಗಳೂರು ಉಸ್ತುವಾರಿ ತಮ್ಮ ಬಳಿಯೇ ಇಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಅವರು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಬಾಗಲಕೋಟೆ ಜತೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿಯ ಹೆಚ್ಚುವರಿ ಹೊಣೆ ನೀಡಿದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿಗೆ ಕೊಪ್ಪಳ ಹಾಗೂ ಬಳ್ಳಾರಿ ಉಸ್ತುವಾರಿ ನೀಡಲಾಗಿದ್ದು ಡಿಸಿಎಂ ಅಶ್ವಥ್ ನಾರಾಯಣ್ ಗೆ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಉಸ್ತುವಾರಿವಹಿಸಲಾಗಿದೆ. ಶ್ರೀರಾಮುಲುಗೆ ರಾಯಚೂರು ಹಾಗೂ ಚಿತ್ರದುರ್ಗ, ಬಸವರಾಜ್ ಬೊಮ್ಮಾಯಿಗೆ ಹಾವೇರಿ ಹಾಗೂ ಉಡುಪಿ, ಪ್ರಭು ಚೌಹಾಣ್ ಗೆ ಬೀದರ್ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.