ಪ್ರಮುಖ ಸುದ್ದಿ
ಯಾದಗಿರಿಃ ವೃದ್ಧಾಶ್ರಮದ ಹಿರಿಯ ಜೀವಿಗಳೊಂದಿಗೆ ದೀಪಾವಳಿ ಆಚರಿಸಿದ ಪೊಲೀಸರು
ವೃದ್ಧಾಶ್ರಮದ ಹಿರಿಯ ಜೀವಿಗಳೊಂದಿಗೆ police ದೀಪಾವಳಿ
ಯಾದಗಿರಿಃ ಬೆಳಕಿನ ಹಬ್ಬ ದೀಪಾವಳಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ನೇತೃತ್ವದಲ್ಲಿ ಪೊಲೀಸರು ಇಲ್ಲಿನ ನಗರಸಭೆ ಕಚೇರಿ ಹತ್ತಿರವಿರುವ ಅಕ್ಷತಾ ಮಹಿಳಾ ಮಂಡಲದ ವೃದ್ಧಾಶ್ರಮದಲ್ಲಿ ಬುಧವಾರ ವಿಶೇಷವಾಗಿ ಆಚರಿಸಿದರು.
ಅಲ್ಲದೆ ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಿಗಳಿಗೆ ಹೊಸ ಬಟ್ಟೆ ವಿತರಿಸಿದರು. ಜೊತೆಗೆ ಹಬ್ಬದೂಟವನ್ನು ಅವರೊಂದಿಗೆ ಸವಿದರು. ಮತ್ತು ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆಯೂ ನಡೆಯಿತು. ಆ ನಂತರ ಸಾಂಕೇತಿಕವಾಗಿ ದೀಪ ಹಚ್ಚಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮೌನೇಶ್ವರ್ ಪಾಟೀಲ್, ಪಿಎಸ್ಐ ಮಹಾಂತೇಸ್ ಸಜ್ಜನ್ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.