ಡಿಕೆ ಹೆಗಲಿಗೆ ಕೆಪಿಸಿಸಿ ಸಾರಥ್ಯ.!?
ದೆಹಲಿಃ ತಿಹಾರ ಜೈಲ್ನಿಂದ ಷರತ್ತು ಬದ್ಧ ಜಾಮೀನು ಪಡೆದುಕೊಂಡು ಹೊರ ಬರುತ್ತಿದ್ದಂತೆ ಡಿ.ಕೆ.ಶಿವಕುಮಾರಗೆ ಕಾಯುತ್ತಿದೆಯಾ…ದೀಪಾವಳಿ ಗಿಫ್ಟ್ ಎಂಬುದೇ ಇದೀಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಡಿಕೆಶಿಗೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಎಲ್ಲೆ ಹಬ್ಬಿದೆ. ಕನಕಪುರ ಬಂಡೆಗೆ ಕಾಂಗ್ರೆಸ್ ದೊಡ್ಡ ಗಿಫ್ಟ್ ನೀಡಲಿದೆ ಎಂದು ಕೇಳಿ ಬರುತ್ತಿರುವ ಸುದ್ದಿ ಕರ್ನಾಟಕ ಕಾಂಗ್ರೆಸ್ ನಾಯಕರಲ್ಲಿ ದೊಡ್ಡ ಸಂಚಲನವೇ ಸೃಷ್ಠಿಯಾಗಿದೆ.
ಒಂದಡೆ ಡಿಕೆ ಅಭಿಮಾನಿಗಳು, ಕಾರ್ಯಕರ್ತರು ಸಂತಸ ಪಟ್ಟರೆ, ರಾಜ್ಯದ ಕಾಂಗ್ರೆಸ್ ಕೆಲ ನಾಯಕರಿಗೆ ಒಳಗೊಳಗೆ ಆತಂಕ ಉಂಟಾಗಿದೆ. ಡಿಕೆ ಹೊರ ಬಂದಿರುವದು ಒಂದಡೆ ಸಂತಸವಾದರೆ, ಡಿಕೆ ಹೆಗಲಗೆ ರಾಜ್ಯದ ದೊಡ್ಡ ಭಾರ ಹಾಕಲಾಗುತ್ತಿದೆ ಎಂಬ ಗುಸುಗುಸು ಹಬ್ಬಿದೆ.
ಜೈಲಿನಲ್ಲಿರುವಾಗಲೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ, ಬುಧವಾರ ಡಿಕೆ ಅವರನ್ನು ಭೇಟಿ ಮಾಡಿ ಅದೊಂದು ಅಭಯ ನೀಡಿದ್ದಾರೆ ಎನ್ನಲಾಗಿದೆ. ಅದೇ ಕೆಪಿಸಿಸಿ ಅಧ್ಯಕ್ಷ ಪಟ್ಟ ಡಿಕೆಶಿಗೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮುಂದೆ ಕಾಯ್ದು ನೋಡಬೇಕಿದೆ.