ಅಂತ್ಯವಲ್ಲ ಆರಂಭ ಮೆರವಣಿಗೆಯಲ್ಲಿ ಡಿಕೆಶಿ ಗುಡುಗು
ಡಿಕೆಶಿಗೆ ಅದ್ದೂರಿ ಸ್ವಾಗತ, ಕಾರ್ಯಕರ್ತರ ಹರ್ಷ
ಬೆಂಗಳೂರಃ ನನ್ನ ನಲವತ್ತು ವರ್ಷದ ರಾಜಕಾರಣವನ್ನು ಷಡ್ಯಂತರ ಮೂಲಕ ಕೊನೆಗಾಣಿಸಲು ಯತ್ನಿಸಿದರು. ಅದು ಸಾಧ್ಯವಿಲ್ಲ. ನೀವೆಲ್ಲ ನನ್ನಂಥ ಪ್ರಾಮಾಣಿಕ ಕಾರ್ಯಕರ್ತನಿಗೆ ಆದ ಅನ್ಯಾಯವನ್ನು ಖಂಡಿಸಿ, ದೇಶದಾದ್ಯಂತ ಖಂಡಿಸಿ, ಹೋರಾಟ ನಡೆಸಿದ್ದೀರಿ ನಿಮಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ, ಶಾಸಕ ಡಿ.ಕೆ.ಶಿವಕುಮಾರ ಹೇಳಿದರು.
ತಿಹಾರ ಜೈಲಿನಿಂದ ಬಿಡುಗಡೆಯಾದ ನಂತರ ಇದೆ ಮೊದಲಬಾರಿಗೆ ಬೆಂಗಳೂರಿಗೆ ಆಗಮಿಸಿದ ಅವರನ್ನು ಅಭಿಮಾನಿಗಳು, ಕಾರ್ಯಕರ್ತರು ಅದ್ದೂರಿಯಾಗ ಕೈಗೊಂಡ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿಮ್ಮ ಅಭಿಮಾನಕ್ಕೆ ಚಿರಋಣಿ. ನಾನು ಅಳುವ ಮಗನಲ್ಲ. ನಿಮ್ಮ ಪ್ರೀತಿ, ವಿಶ್ವಾಸ ಅಭಿಮಾನಕ್ಕೆ ಕಣ್ಣೀರಿಡುವೆ. ಆದರೆ ಇಂಥ ಪ್ರಕರಣಗಳಿಗೆ ಜೈಲು ವಾಸಕ್ಕೆ ಅಳುವ ಮಗನಲ್ಲ ಎಂದ ಅವರು, ಇದು ಅಂತ್ಯವಲ್ಲ ಆರಂಭ. ನೋವಿನಿಂದ ಕಣ್ಣೀರಿಟ್ಟಿಲ್ಲ. ಪ್ರೀತಿಗಾಗಿ ಕಣ್ಣೀರಿಟ್ಟಿದ್ದೀನಿ.
ನನಗೆ ಪೂಜೆ ಪ್ರಾರ್ಥನೆ ಮಾಡಿದ್ಧೀರಿ, ಯಾವ ಜನ್ಮದ ಪುಣ್ಯವೋ ಇಷ್ಟೆಲ್ಲ ಮಾಡಿದ್ದೀರಿ. ನಾನು ಯಾವ ರೀತಿ ನಿಮ್ಮ ಋಣ ತೀರಿಸಲಿ ಎಂದು ತಿಳಿಯುತ್ತಿಲ್ಲ. ನಾನು ಒಂದು ಕುಟುಂಬದ ಆಸ್ತಿ ಅಲ್ಲ ನಾನು ನಿಮ್ಮೆಲ್ಲರ ಆಸ್ತಿ ಎಂದರು.
ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು, ಅಭಿಮಾನಿಗಳು ಕಾರ್ಯಕರ್ತರು ಆಗವಹಿಸಿದ್ದರು. ಶಾಸಕ ಕೃಷ್ಣೆಭೈರೆಗೌಡ ಸೇರಿದಂತೆ ಇತರರು ಇದ್ದರು.