ಕಾಂಗ್ರೆಸ್ ಕಚೇರಿ ನನ್ನ ದೇವಾಲಯ, ರಾಜಕೀಯ ನನ್ನ ಫ್ಯಾಷನ್-ಡಿಕೆಶಿ
ಡಿಕೆಶಿ ಸುದ್ದಿಗೋಷ್ಠಿಯಲ್ಲಿ ಏನೇನ್ ಹೇಳಿದರೂ ಫುಲ್ ಡಿಟೇಲ್..!
ಬೆಂಗಳೂರಃ ತಿಹಾರನಿಂದ ಬೆಂಗಳೂರಿಗೆ ಬಂದ ನಾನು ಸೀದಾ ಕಾಂಗ್ರೆಸ್ ಪಕ್ಷದ ಕಚೇರಿಗೆ ಬಂದಿದ್ದೇನೆ. ಪಕ್ಷದ ಕಚೇರಿ ನನಗೆ ಮತ್ತು ಕಾರ್ಯಕರ್ತರಿಗೆ ದೇವಾಲಯವಿದ್ದಂತೆ. ಈ ಕಚೇರಿಯಲ್ಲಿ ಭಕ್ತ ಮತ್ತು ಭಗವಂತನ ನಡುವೆ ವ್ಯವಹಾರವಿದೆ. ಈ ಕಾರಣಕ್ಕೆ ನಾನು ಮೊದಲು ಕಚೇರಿಗೆ ಬಂದಿದ್ದೇನೆ ಎಂದು ಡಿ.ಕೆ.ಶಿವಕುಮಾರ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕಚೇರಿವರೆಗೂ ಅದ್ದೂರಿ ಮೆರವಣಿಗೆಯಲ್ಲಿ ಆಗಮಿಸಿದ್ದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನನಗಾಗಿ ಕಾರ್ಯಕರ್ತರು, ಅಭಿಮಾನಿಗಳು ಪಕ್ಷದ ಮುಖಂಡರು ಸಾಕಷ್ಟು ಹೋರಾಟ ಮಾಡಿದ್ದಾರೆ. ನನಗೆ ಧೈರ್ಯ ತುಂಬಿದ್ದಾರೆ. ಹೋರಾಟದ ಮೂಲಕ ನನ್ನ ಜೊತೆ ಇದ್ದಾರೆ. ಮೊದಲು ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ ಅವರು,
ನನಗ್ಯಾಕೆ ಈ ಪರಿಸ್ಥಿತಿ ಬಂತು ಎಂದು ನಾನು ಬಹಳಷ್ಟು ಬಾರಿ ಯೋಚಿಸಿದ್ದೇನೆ. ಇಡಿ ನೀಡಿದ ಸಮನ್ಸ್ಗೆ ನಾನು ಪೂರಕವಾಗಿಯೇ ಸಹಕಾರಿಸಿದ್ದೇನೆ. ನನ್ನ ವ್ಯವಹಾರದಲ್ಲಿ ಬದುಕಿನಲ್ಲಿ ನಾನು ಮೋಸ ಮಾಡಿದ್ದೇನೆಯೇ.? ನನ್ನ ಮತ್ತು ಸಹೋದರ ಡಿ.ಕೆ.ಸುರೇಶ ಸೇರಿದಂತೆ ನನ್ನ ತಾಯಿ, ಮಗಳ ಅಫಿಡವೇಟ್ ಸಲ್ಲಿಸಿದ್ದೇನೆ.
ಮುಂದಿನ ದಿನಗಳಲ್ಲಿ ಇನ್ನೂ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳ ಮುಂದಿಡಲಿದ್ದೇನೆ. ಹುಟ್ಟುತ್ತಲೇ ನಾನು ಕೃಷಿಕ, ಉದ್ಯಮ ನನ್ನ ವೃತ್ತಿ, ಶಿಕ್ಷಣದ್ಯೋಮ ನನ್ನ ಆಯ್ಕೆ ರಾಜಕೀಯ ನನ್ನಯ ಫ್ಯಾಷನ್. ನಾನು ತಾಳ್ಮೆಯಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ನಾನು ಸಂವಿಧಾನ ಏನು ಹೇಳುತ್ತದೆ ಅದರಂತೆ ನಡೆದುಕೊಂಡು ಹೋಗುವವನು ನಾನು. ನಾನು ಯಾರನ್ನು ಧ್ವೇಷಿಸಿಲ್ಲ. ಮುಂದೆಯು ದ್ವೇಷಿಸಲ್ಲ. ಕೆಲವು ಅದೃಷ್ಟದಿಂದ ಅಧಿಕಾರಕ್ಕೆ ಬರುತ್ತಾರೆ. ಅದರಲ್ಲಿ ಹರಕೆಯಾಗುತ್ತಾರೆ. ನಾನು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯುವದಿಲ್ಲ. ಪಕ್ಷ ನನ್ನ ಮೇಲೆ ಇಟ್ಟ ನಂಬಿಕೆ ಅರ್ಹನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ.
ಯಾರಿಗೂ ಮೋಸ ಮಾಡಿಲ್ಲ. ಮೋಸದ ಬದುಕು ನನಗೆ ಬೇಕಿಲ್ಲ. ಜನರು, ಅಭಿಮಾನಿ ಮತ್ತು ಪಕ್ಷ ಕಾರ್ಯರ್ತರ ಋಣ ತೀರಿಸುವ ಶಕ್ತಿ ನಾನು ನಂಬಿದ ಶಕ್ತಿ ನನಗೆ ಒದಗಿಸಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ. ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ.
ಆ ಮೇಲೆ ಸೋನಿಯಾಗಾಂಧೀಯವರು ಒಮ್ಮೆಯೂ ಜೈಲಿಗೆ ಬಂದವರಲ್ಲ. ಜೈಲಲ್ಲಿ ತಿಂಗಳಿಗೆ ಎರಡು ದಿನಾ ಮಾತ್ರ ಭೇಟಿಗೆ ಸಮಯ ನಿಗದಿ ಮಾಡಿದ್ದರು. ಅದರಂತೆ ಇನ್ನೂ ಬಹಳಷ್ಟು ಜನರಿಗೆ ನನ್ನ ಭೇಟಿ ಮಾಡಲು ಸಮಯ ಜೈಲ ಅಧಿಕಾರಿಗಳು ಕೊಡಲಿಲ್ಲ. ಅಲ್ಲದೆ ನನ್ನ ಭೇಟಿಯಾಗಲು ನನ್ನ ಹೆಂಡತಿ, ಮಕ್ಕಳಿಗೂ ನಾನು ಬರಬೇಡಿ ಎಂದು ಹೇಳಿದೆ. ಕಾರಣ ಸೋನಿಯಾ ಮೇಡಂ, ವಕೀಲರು ಇತರರು ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬರಬೇಕಾಗುತ್ತದೆ. ಹೀಗಾಗಿ ನನ್ನ ಸಂಬಂಧಿಕರಿಗೆ ನಾನು ಬರಬೇಡಿ ಎಂದೆ ಹೇಳಿದ್ದೆ. ನನ್ನ ಅಭಿಮಾನಿಗ:ಳು, ವಿವಿಧ ಸಮಾಜ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರಮುಖರ ಪ್ರೀತಿಗೆ ನಾನು ಸದಾ ಚಿರಋಣಿ.
ದೆಹಲಿಯಲ್ಲಿ ನನಗಾಗಿ ನನ್ನ ಅಭಿಮಾನಿಗಳು, ಕಾರ್ಯಕರ್ತರು ಹೋರಾಟ ಮಾಡಿದರು. ರಸ್ತೆಯಲ್ಲಿ ನಿಂತು ಬಡಿದಾಡಿದರು. ಅವರೆಲ್ಲರಿಗೂ ನಾನು ಯಾವ ರೀತಿ ಋಣ ತೀರಿಸಬೇಕು ಎಂಬುದು ಅರ್ಥವಾಗುತ್ತಿಲ್ಲ. ದೇವರು ಋಣ ತೀರಿಸುವ ಶಕ್ತಿ ನೀಡಲಿ ಎಂದು ಮತ್ತೊಮ್ಮೆ ತಿಳಿಸದರು.
ಅಲ್ಲದೆ ಜೈಲಲ್ಲಿ ಕುಳಿತು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪುಸ್ತಕಗಳನ್ನು ಓದಿದ್ದೇನೆ. ಪ್ರತಿ ಪದಗಳನ್ನು ಸಹ ನನಗೆ ನೆನಪಿವೆ. ಈಗ ಸಿಬಿಐ ನನ್ನ ಪ್ರಶ್ನಿಸುತ್ತಿದೆ. ಸಿಬಿಐಗೆ ಕಾನೂನು ಅನುಗುಣವಾಗಿ ನಾನು ಸಹಕಾರ ನೀಡುತ್ತೇನೆ.
ಜನ್ಮ ಕೊಟ್ಟ ತಾಯಿ ಮಗನನ್ನು ಬಿಟ್ಟು ಮತ್ಯಾರನ್ನ ನಂಬಬೇಕು. ನನ್ನ ವಿರುದ್ಧ ಮನಿ ಲಾಂಡ್ರಿಂಗ್ ದೂರು ದಾಖಲಾಗಿದೆ. ನನ್ನ ವಿರುದ್ಧದ ಇಡಿ ಕೇಸ್ ಇಡಿ ದೇಶಕ್ಕೆ ಮಾದರಿಯಾಗಬೇಕು. ನಾನು ಸಚಿವನಾಗಿದ್ದಾಗ ಸಂಸದರಿಗೆ ಪೋನ್ ಕೊಟ್ಟಿದ್ದೆ. ಆಗ ತಕ್ಷಣಕ್ಕೆ ಐಟಿಯಿಂದ ನೋಟಿಸ್ ಬಂದಿತ್ತು. ನಾನು ಸ್ವಂತ ಅಕೌಂಟ್ ನಿಂದ ಫೋನ್ ಕೊಡಿಸಿದ್ದೆ.
ನನ್ನ ವಿರುದ್ಧ ಮಾತನಾಡಿದವರೇ, ನಾನು ಕೊಟ್ಟ ಫೋನ್ ಗೆ ಸಿಮ್ ಹಾಕಿಕೊಂಡಿದ್ದಾರೆ. ನನಗೆ ನೋಟಿಸ್ ಬಂತು ಆದರೆ ಫೋನ್ ತೆಗೆದುಕೊಂಡವರಿಗೆ ನೋಟಿಸ್ ಹೋಗಬೇಕಿತ್ತಲ್ಲ. ಹೋಗಲಿಲ್ಲ ಯಾಕೆ ಪ್ರಶ್ನಿಸಿದರು. ನಾನು ಹಿಂದೆ ಓಡಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುತ್ತೇನೆ. ನನ್ನ ಮತ್ತು ಕುಟುಂಬಕ್ಕೆ ಸೇರಿದಂತೆ ಸಂಬಂಧಿಕರು ಸ್ನೇಹಿತರಿಗೂ ಟಾರ್ಚರ ಕೊಟ್ಟಿದ್ದಾರೆ.
ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಿತ್ರರು ಸಹ ನನ್ನ ಮನೆಗೆ ತೆರಳಿ ನಮ್ಮ ತಾಯಿಗೆ ಧೈರ್ಯ ತುಂಬಿದ್ದಾರೆ. ನಮ್ಮ ಸಮಾಜದ ಜನರು, ಸಮಾಜದ ಗುರುಗಳು ಮನೆಗೆ ಬಂದು ನಮ್ಮ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ನನ್ನ ಪ್ರೀತಿಯ ಕಾರ್ಯಕರ್ತರು ನನಗಾಗಿ ಕಣ್ಣೀರಿಟಿದ್ದಾರಲ್ಲ ಅವರೆಲ್ಲ ನನ್ನ ಕುಟುಂಬವೇ ಬರಿ ನನ್ನ ಕುಟುಂಬ ಮಾತ್ರ ನಾನು ಪ್ರೀತಿಸ್ತೀನಿ ಅಂತಲ್ಲ ಎಲ್ಲಾ ನನ್ನ ಕಾರ್ಯಕರ್ತರು ನನ್ನ ಕುಟುಂಬವೇ. ಎಲ್ಲವನ್ನು ಎದುರಿಸುವ ಶಕ್ತಿ ನನಗಿದೆ ಎಂದು ಮತ್ತೊಮ್ಮೆ ಎಲ್ಲರಿಗೂ ಕೃತಜ್ಞತೆ ಸಲ್ಲಸಿ, ನನಗಾಗಿ ಕಷ್ಟಪಟ್ಟ ಎಲ್ಲರ ಋಣ ತೀರಿಸುವ ನಾನು ನಂಬಿದ ಆ ಭಗವಂತ ನನಗೆ ಶಕ್ತಿ ಕೊಡಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇನೆ ಎಂದರು.