ಪ್ರಮುಖ ಸುದ್ದಿ
ಡಿಕೆಶಿ ಹೊಸ ಶಕೆ ಆರಂಭಿಸಲಿದ್ದಾರೆ -ಡಿಕೆ ಸುರೇಶ
ದೆಹಲಿಃ ಡಿ.ಕೆ.ಶಿವಕುಮಾರ ರಾಜಕೀಯ ಅಂತ್ಯವೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ ಅದು ಸಾಧ್ಯವಿಲ್ಲ. ಡಿಕೆಶಿ ರಾಜ್ಯದ ಜನರ ಸೇವೆಗೆ ಸದಾ ಬದ್ಧರಿದ್ದರು. ಮತ್ತೆ ಹೊಸ ಶಕೆ ಆರಂಭಿಸಲಿದ್ದಾರೆ ಕಾಯ್ದು ನೋಡಿ ಎಂದು ಸಂಸದ ಡಿಕೆ ಸುರೇಶ ಹೇಳಿಕೆ ನೀಡಿದರು.
ನಗರದಲ್ಲಿ ಇಂದು ಡಿಕೆಶಿ ಪ್ರಕರಣ ವಿಚಾರಣೆ ಸಂಬಂಧ ದೆಹಲಿ ಹೈಕೋರ್ಟ್ಗೆ ತೆರಳಿದ್ದ ಸಂದರ್ಭ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಡಿಕೆ ಶಿವಕುಮಾರ ಶೀಘ್ರದಲ್ಲಿ ರಾಜಕೀಯದಲ್ಲಿ ಹೊಸ ಶಕೆ ಪ್ರಾರಂಭ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.