ಪ್ರಮುಖ ಸುದ್ದಿವಿನಯ ವಿಶೇಷ
ಬಿಜೆಪಿ ಶಾಸಕ ಶ್ರೀರಾಮುಲುಗೆ ಸಚಿವ ಡಿಕೆಶಿ ಓಪನ್ ಆಫರ್!
ಬೆಂಗಳೂರು: ವಿಧಾನಸಭೆಯಲ್ಲಿ ಭೋಜನ ವಿರಾಮದ ವೇಳೆ ಸಚಿವ ಡಿ.ಕೆ.ಶಿವಕುಮಾರ್ ನಗುನಗುತ್ತಲೇ ಬಿಜೆಪಿ ಶಾಸಕ ಶ್ರೀರಾಮುಲುಗೆ ಪಕ್ಷಕ್ಕೆ ಬರುವಂತೆ ಓಪನ್ ಆಫರ್ ನೀಡಿದ್ದಾರೆ. ನಿಮ್ಮ ಪಕ್ಷದಲ್ಲಿ ಬೇರೆ ಬೇರೆಯವರನ್ನು ಡಿಸಿಎಂ ಮಾಡುತ್ತಾರೆ. ನಮ್ಮ ಕಡೆಗೆ ಬನ್ನಿ ನಿಮ್ಮ ಬಯಕೆ ಈಡೇರಿಸುತ್ತೇವೆ ಎಂದಿದ್ದಾರೆ. ಸಚಿವ ಡಿಕೆಶಿ ಮಾತಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಥ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸದನ ವಿರಾಮದ ವೇಳೆ ಬಿಜೆಪಿ ಶಾಸಕರೆಲ್ಲ ಊಟಕ್ಕೆ ತೆರಳಿದ್ದು ಶ್ರೀರಾಮುಲು ಮಾತ್ರ ಉಳಿದುಕೊಂಡಿದ್ದರು. ಅದೇ ವೇಳೆ ಸಚಿವ ಡಿ.ಕೆ.ಶಿವಕುಮಾರ್ ತಮಾಷೆಯಾಗಿಯೇ ಆಫರ್ ನೀಡಿದ್ದಾರೆ. ಬಿಜೆಪಿ ಶಾಸಕ ಶ್ರೀರಾಮುಲು ಕೇವಲ ನಗುವಿನ ಉತ್ತರ ನೀಡಿದ್ದಾರೆ. ಬಳ್ಳಾರಿ ಲೋಕಸಭೆ ಉಪ ಚುನಾವಣೆ ಹಾಗೂ ಕಳೆದ ಚುನಾವಣೆ ವೇಳೆ ಸಚಿವ ಡಿಕೆಶಿ, ಬಿಜೆಪಿ ಶಾಸಕ ಶ್ರೀರಾಮುಲು ನಡುವೆ ವಾಕ್ಸಮರ ನಡೆದಿತ್ತು.