DK ಶಿವಕುಮಾರ ಬಂಧನ ಭೀತಿ.?
ಇಡಿ,ಐಟಿ,ಸಿಬಿಐ ಬಿಜೆಪಿ ಮೋರ್ಚಾದಂತೆ ಕೆಲಸ-ಡಿಕೆ ಸುರೇಶ
ಬೆಂಗಳೂರಃ ವರ್ಷದ ಹಿಂದೆ ಸುಮಾರು 68 ಕಡೆ ನಮಗೆ ಸಂಬಂಧಿಸಿದ ಮನೆ, ಆಫೀಸ್ ಸಂಸ್ಥೆ ಸಂಬಮಧಿಕರು ಆತ್ಮೀಯರ ಮನೆ ಮೇಲೂ ಐಟಿ ದಾಳಿ ನಡೆಸಿ ಸುಮಾರು ನಾಲ್ಕು ಪ್ರಕರಣಗಳನ್ನು ದಾಖಲು ಮಾಡಿಕೊಂಡಿತ್ತು.
ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಐಟಿ ರೇಡ್ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಬಿಜೆಪಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ ಆರೋಪಿಸಿದ್ದಾರೆ.
ನಗರದ ಸದಾಶಿವ ನಗರದ ಅವರ ಮನೆಯಲ್ಲಿ ನಡೆಸಿದ ಸುದ್ಧಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಐಟಿ ಇಡಿ ಸಿಬಿಐ ಅಧಿಕಾರವನ್ನು ರಾಜ್ಯದ ಬಿಜೆಪಿ ನಾಯಕರು ದುರ್ಬಳಕೆ ಮಾಡಿಕೊಂಡು ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಹುನ್ನಾರವನ್ನು ಇಲ್ಲಿನ ಬಿಜೆಪಿ ನಾಯಕರು ರಾಷ್ಟ್ರೀಯ ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ.
ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂಬ ಆಸೆಯಿಂದ ಇಂತಹ ಕಾರ್ಯಕ್ಕೆ ಕೈಹಾಕಿದ್ದಾರೆ..
ಇಡಿ, ಐಟಿ ಮತ್ತು ಸಿಬಿಐ ಬಿಜೆಪಿ ಮೋರ್ಚಾಗಳಾಗಿ ಕೆಲಸ ಮಾಡುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. ಈ ಮೂಲಕ ಹಣ ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಡಿಕೆಶಿ ಬಂಧನದ ಭೀತಿಯನ್ನು ಎದುರಿಸುವಂತಾಗಿದೆ.