ಪ್ರಮುಖ ಸುದ್ದಿ
ಡಿಕೆಶಿಗೆ ಸಂಕಷ್ಟ : ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಮಾಡಿದ ಡಿಕೆಶಿ!
ಬೆಂಗಳೂರು : ಮಾಜಿ ಸಚಿವ ಡಿ . ಕೆ . ಶಿವಕುಮಾರ್ ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಪ್ರಕರಣವು ವಿಚಾರಣೆಗೆ ಯೋಗ್ಯವಿದೆ ಎಂದಿದ್ದು ಇಡಿ ಸಮನ್ಸ್ ಗೆ ತಡೆ ನೀಡಲು ನ್ಯಾಯಲಯ ನಿರಾಕರಿಸಿದೆ. ಹೀಗಾಗಿ, ಮಾಜಿ ಸಚಿವ ಡಿಕೆಶಿಗೆ ಬಂಧನದ ಬೀತಿ ಕಾಡುತ್ತಿದ್ದು ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಬದಲು ಡಿಕೆಶಿ, ದೇವೇಗೌಡರ ಮೊರೆ ಹೋಗಿದ್ದು ತೀವ್ರ ಕುತೂಹಲ ಕೆರಳಿಸಿದೆ.