ಪ್ರಮುಖ ಸುದ್ದಿ
ಡಿಕೆಶಿಗೆ ಸಿಗದ ಜಾಮೀನು ಮತ್ತೆ ಜೈಲೆ ಗತಿ
ಡಿಕೆಶಿಗೆ ಜಾಮೀನು ನಿರಾಕರಿಸಿದ ಕೋರ್ಟ್
ಬೆಂಗಳೂರುಃ ಡಿಕೆಶಿಗೆ ಜಾಮೀನು ನೀಡುವಂತೆ ಅವರ ಪರ ವಕೀಲರು ದೆಹಲಿಯ ರೋಸ್ ಅವೆನ್ಯು ಕೋರ್ಟ್ಹೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡಿದ್ದ ಅಲ್ಲಿ ಇಡಿ ಕೋರ್ಟ್ ಡಿಕೆಶಿಗೆ ಜಾಮೀನು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಹೀಗಾಗಿ ಡಿಕೆಶಿಗೆ ಮತ್ತೇ ಜೈಲೆ ಗತಿ ಎನ್ನುವಂತಾಗಿದೆ. ಇಂದು ಮದ್ಯಾಹ್ನ 3ಃ30 ಕ್ಕೆ ಜಾಮೀನು ಕುರಿತು ಆದೇಶ ಹೊರಬೀಳಬೇಕಿತ್ತು. ಸಂಜೆ 5 ಗಂಟೆಯಾದರೂ ನ್ಯಾಯಾಧೀಶರು ಜಾಮೀನು ಕುರಿತು ತೀರ್ಪು ನೀಡಿರಲಿಲ್ಲ.
ನ್ಯಾಯಾಲಯದ ಆವರಣದಲ್ಲಿ ಮುಂಚಿತವಾಗಿಯೇ ಡಿಕೆಶಿ ಕುಟುಂಬಸ್ಥರು ಕುತುಹಲದಿಂದ ಸೇರಿದ್ದರು 5 ಗಂಟೆ ನಂತರ ಕೋರ್ಟ್ ಹಾಲ್‍ಗೆ ಬಂದ ನ್ಯಾಯಾಧೀಶರು ಒಂದೇ ವಾಕ್ಯದಲ್ಲಿ ಜಾಮೀನು ನಿರಾಕರಿಸಿದ ಕುರಿತು ಆದೇಶವನ್ನು ಓದಿದ್ದಾರೆ.
ಹೀಗಾಗಿ ಜಾಮೀನು ಸಿಗುವ ಭರವಸೆಯಲ್ಲಿದ್ದ ಡಿಕೆಶಿ ಕುಟುಂಬಸ್ಥರಿಗೆ ನಿರಾಸೆ ಮೂಡಿಸಿದೆ. ಈ ಕುರಿತು ಮೇಲ್ಮನವಿ ಸಲ್ಲಿಸಲು ಡಿಕೆಶಿ ಪರ ವಕೀಲರು ನಿರ್ಧರಿಸಿದ್ದು, ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.