ಪ್ರಮುಖ ಸುದ್ದಿ
ಡಿಕೆಶಿಗೂ ಕೊರೊನಾ ಪಾಸಿಟಿವ್.! ಆಸ್ಪತ್ರೆಗೆ ದಾಖಲು
ಡಿಕೆಶಿಗೂ ಕೊರೊನಾ ಪಾಸಿಟಿವ್.!
ವಿವಿ ಡೆಸ್ಕ್ಃ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಣ ಡಿ.ಕೆ.ಶಿವಕುಮಾರ ಅವರಿಗೂ ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದ್ದು, ಅವರು ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಾಯಕ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿರುವದು ಕಂಡು ಬರುತ್ತಿದೆ.
ಡಿಕೆಶಿ ಕಾಂಗ್ರೆಸ್ ಪಕ್ಷ ಕಟ್ಟುವ ಸವಾಲನ್ನು ಸ್ವೀಕರಿಸಿ ಮುನ್ನುಗ್ಗುತ್ತಿರುವ ಈ ವೇಳೆ ಕೊರೊನಾ ಅವರನ್ನು ಹೈರಾಣಾಗಿಸಲು ಹೊರಟಂತಿದೆ. ಈ ಕೂಡಲೇ ಗುಣಮುಖರಾಗಿ ಹೊರಬರಲಿ ಎಂದು ಅಭಿಮಾನಿಗಳ ಆಶಯವಾಗಿದೆ.