ಪ್ರಮುಖ ಸುದ್ದಿ
ಡಾ: ಎ.ಎನ್.ಉಪಾಧ್ಯೆ ಸಂಶೋಧನಾ ಪ್ರಶಸ್ತಿಗೆ ಅಕ್ಕಿ ಆಯ್ಕೆ
ಡಾ: ಎ.ಎನ್.ಉಪಾಧ್ಯೆ ಸಂಶೋಧನಾ ಪ್ರಶಸ್ತಿಗೆ ಅಕ್ಕಿ ಆಯ್ಕೆ
ವಿವಿ ಡೆಸ್ಕ್ಃ ಸಂಸ್ಕೃತ,ಪ್ರಾಕೃತ,ಕನ್ನಡ,ಮರಾಠಿ,ಹಿಂದಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರಾದ ದಿ.ಡಾ:ಎ.ಎನ್.ಉಪಾಧ್ಯೆ ಜೈನ ಸಾಹಿತ್ಯ ನಿರ್ಮಿತಿ ಹಾಗೂ ಸಂಶೋಧನಾ ಪ್ರಶಸ್ತಿಯು ಗೋಗಿಯ ಹಿರಿಯ ಸಂಶೋಧಕ ಸಾಹಿತಿ ಡಿ.ಎನ್.ಅಕ್ಕಿಯವರಿಗೆ ಲಭಿಸಿದೆ.
ಸಾಂಗ್ಲಿಯ ದಕ್ಷಿಣ ಭಾರತ ಜೈನ ಸಭಾ ಹಾಗೂ ಹುಬ್ಬಳ್ಳಿಯ ದಿಗಂಬರ ಜೈನ ಬೋರ್ಡಿಂಗ್ ಹಾಗೂ ಪದವಿಧರ ಸಂಘಟನಾ ಸಾಂಗ್ಲಿ ಇವರ ಸಹಯೋಗದೊಂದಿಗೆ ಇದೇ ತಿಂಗಳ 25 ರಂದು ಹುಬ್ಬಳ್ಳಿಯ ಜೈನ ಬೋರ್ಡಿಂಗದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ:ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ನಾಂದಣಿಯ ಶ್ರೀ ಜೈನ ಮಠದ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಮಾರಂಭದ ಆಯೋಜಕರು ತಿಳಿಸಿದ್ದಾರೆ.