ಪ್ರಮುಖ ಸುದ್ದಿಸಾಹಿತ್ಯ

ಹಿರಿಯ ಸಾಹಿತಿ, ಸಂಶೋಧಕ ಅಕ್ಕಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಕಕ ಭಾಗದ ಹಿರಿಯ ಸಾಹಿತಿ, ಸಂಶೋಧಕ ಅಕ್ಕಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

-ಮಲ್ಲಿಕಾರ್ಜುನ ಮುದ್ನೂರ

ಗೌರವಿಸು ಜೀವನವ, ಗೌರವಿಸು ಚೇತನವ!
ಆರದೋ ಜಗವೆಂದು ಭೇದವೆಣಿಸದಿರು,
ಹೋರುವದೆ ಜೀವನ ಸಮೃದ್ಧಿಗೋಸುಗ ನಿನಗೆ
ದಾರಿಯಾತ್ಮೋನ್ನತಿಗೆ ಮಂಕುತಿಮ್ಮ. ಎಂಬ ಕವಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಸಾಲುಗಳು ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ, ಇತಿಹಾಸ ಸಂಶೋಧಕ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಿ.ಎನ್.ಅಕ್ಕಿಯವರ ವ್ಯಕ್ತಿತ್ವ ಮತ್ತು ಸಾಧನೆಗೆ ತುಂಬಾ ಅನ್ವಯಿಸುತ್ತದೆ.

ಅದಮು ಜೀವನ ಪ್ರೀತಿಯೊಂದಿಗೆ ಅರ್ಥಪೂರ್ಣ ಕೌಟುಂಬಿಕ, ಸಆಹಿತ್ಯಕ, ಸಾಂಸ್ಕøತಿಕ ಬದುಕನ್ನು ಸಾಗಿಸಿದ ಅಕ್ಕಿ ಅವರು, ಬದುಕನ್ನು ಗೌರವಿಸುತ್ತ ಹಿರಿಯ-ಕಿರಿಯರೆನ್ನದೆ ಯಾವುದೇ ಜಾತಿ, ಮತ ಪಂಥಗಳೆನ್ನದೆ ಎಲ್ಲರನ್ನು ಪ್ರೀತಿಸುತ್ತಾ, ಗೌರವಿಸುತ್ತಾ, ಬದುಕು ಬರಹಗಳನ್ನು ಒಂದಾಗಿಸಿಕೊಂಡು ಎಲ್ಲರ ಪ್ರೀತಿ, ವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ.
ಸರಳ ಸಜ್ಜನಿಕೆಯ, ಸುಸಂಸ್ಕøತ ಸಾತ್ವಿಕ ನಡೆನುಡಿಯ ದೇವಿಂದ್ರಪ್ಪ ನಾಭಿರಾಜ ಅಕ್ಕಿಯವರು ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕøತಿಕ ಲೋಕದಲ್ಲಿ ಡಿ.ಎನ್.ಅಕ್ಕಿಯವರೆಂದು ಚಿರಪರಿಚಿತರಾಗಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಸಾಂಸ್ಕøತಿಕ ಪರಿಸರದಲ್ಲಿ ತುಂಬಾ ಹೆಸರುವಾಸಿಯಾದ ಅಕ್ಕಿ ಮನೆತನದ ನಾಭಿರಾಜ ಮತ್ತು ಶ್ರೀಮತಿ ಕಾಂತಮ್ಮ ದಂಪತಿಗಳ ಉದರದಲ್ಲಿ 3, ಅಕ್ಟೋಬರ್ 1948 ರಲ್ಲಿ ಜನಿಸಿದರು.

ಹತ್ತನೇಯ ತರಗತಿ ವಿದ್ಯಾಭ್ಯಾಸದ ನಂತರ ಡಿ.ಎನ್.ಅಕ್ಕಿಯವರು ಚಿತ್ರಕಲೆಯಲ್ಲಿ ಡಿಪ್ಲೋಮಾ ಮತ್ತು ಆರ್ಟ್ ಮಾಸ್ಟರ್ ಪದವಿ ಪಡೆದು, 19. ನವೆಂಬರ್ 1971 ರಲ್ಲಿ ಸರ್ಕಾರದಿಂದ ಚಿತ್ರಕಲಾ ಶಿಕ್ಷಕರಾಗಿ ನೇಮಕಗೊಂಡು, ವೃತ್ತಿ ಜೀವನ ಆರಂಭಿಸಿದ ಅವರು 34 ವರ್ಷಗಳ ಸುಧೀರ್ಘ ವೃತ್ತಿ ಬದ್ಧತೆಯಿಂದ ನಿಷ್ಠೆಯಿಂದ ಸೇವೆ ಸಲ್ಲಿಸಿ 30 ಜೂನ್ 2007 ರಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾದರು.

ಸಾಹಿತಿ ಡಿ.ಎನ್.ಅಕ್ಕಿ ಅವರು ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲೆ, ಕಾವ್ಯ, ಲೇಖನ, ಸಂಶೋಧನಾ ಬರಹ, ಮುಂತಾದವುಗಳಲ್ಲಿ ತುಂಬಾ ಕ್ರಿಯಾಶಿಲತೆಯಿಂದ ತೊಡಗಿಸಿಕೊಂಡು ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಶಹಾಪುರ ತಾಲೂಕು ದರ್ಶನ(1985), ಮುಂಬೆಗಳಗು(1987) ಚಿಗುರು ಚಿಂತನ (1987), ಸಗರನಾಡು ಸಿರಿ (1996), ಹಡದವ್ವ ಹಾಡ್ಯಾಳ (2000), ವರ್ಧಮಾನ ಮಹಾವೀರ (ಬಾನುಲಿ ನಾಟಕ) (2002), ಜೈನ ವಿಗ್ರಹಗಳು(2000), ಜೈನ ಜನಪದ ಹಾಡುಗಳು, ಬಾನರಂಗ (ರೇಡಿಯೋ ನಾಟಕಗಳು), ಎಂ,ಟಿ,ಭೋಪಲೆ,(ಜೀವನ ಚರಿತ್ರೆ), ಸನ್ನತಿ ಚಂದ್ರಲಾಂಬಾ, ಮಯಾಮದ್ದಲೆ(2008), ಯಕ್ಷಪ್ರಶ್ನೆ(2008), ಶಿಕ್ಷಕನ ಮನದಾಳದಿಂದ (2011), ಹಕ್ಕುಲತೆನಿ(2011), ಗಂಧೋದಕ(2011) ಸೇರಿದಂತೆ ಮುಂತಾದ ಅನೇಕ ಮೌಲಿಕ ಕೃತಿಗಳನ್ನು ನಾಡಿನ ಸಆರಸ್ವತ ಲೋಕಕ್ಕೆ ಅರ್ಪಿಸಿದ ಕೀರ್ತಿ ಅಕ್ಕಿ ಅವರದ್ದಾಗಿದೆ. ಅಲ್ಲದೆ ಹಲವಾರು ಸಂಶೋಧನ ಲೇಖನಗಳು, ಕವಿತೆಗಳು, ವ್ಯಂಹ ಚಿತ್ರಗಳು, ರಂಗೋಲಿ ಕಲೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸ್ಮರಣ ಸಂಚಿಕೆಗಳಲ್ಲಿ ಅಭಿನಂದನಾ ಗ್ರಂಥಗಳಲ್ಲಿ ಪ್ರಕಟಗೊಂಡಿವೆ.

ಬಹುಮುಖ ಪ್ರತಿಭೆಯುಳ್ಳ ಅವರು ಇತಿಹಾಸದ ಹಲವು ಕಾಲಘಟ್ಟಗಳ ಮೇಲೆ ಬೆಳಕು ಚಲ್ಲುವ ವಿವಿಧ ಶಾಸನಗಳು, ನಾಣ್ಯಗಳು, ಸ್ಮಾರಕಗಳು, ಶಿಲಾಮೂರ್ತಿಗಳು, ಹಸ್ತಪ್ರತಿಗಳು, ದೇವಾಲಯಗಳು ಮುಂತಾದವು ಕುರಿತು ಕ್ಷೇತ್ರಕಾರ್ಯದ ಮೂಲಕ ಸಂಶೋಧನೆಗಳನ್ನು ಕೈಗೊಂಡು ಅವೆಲ್ಲವುಗಳ ಕುರಿತು ಐತಿಹಾಸಿಕ ಸಾಂಸ್ಕøತಿಕ ಮಹತ್ವವನ್ನು ದಾಖಲಿಸಿದ್ದಾರೆ.
ಅಲ್ಲದೆ ಶಾತವಾಹನರ ಕಾಲದ 2000 ವರ್ಷಗಳ ಹಿಂದಿನ ಸೀಸದ ನಾಣ್ಯಗಳ ಶೋಧನೆ ಮತ್ತು ಅವುಗಳ ಸಂಗ್ರಹ ಕಾರ್ಯ ಅಕ್ಕಿಯವರ ಮಹತ್ವದ ಕಾರ್ಯಗಳಲ್ಲಿ ಒಂದಾಗಿದೆ. ಡಿ.ಎನ್.ಅಕ್ಕಿ ಅವರು ಸಲ್ಲಿಸಿದ ಅಮೋಘ ಸೇವೆಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಇದೀಗ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿರುವದು ಪ್ರತಿಭೆಗೆ ಸಲ್ಲಿಬೇಕಾಗಿದ್ದ ಗೌರವ ಇದಾಗಿದೆ ಎನ್ನಲಾಗಿದೆ.

ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಅವರಿಗೆ ರ್ನಾಟಕ ಸರ್ಕಾರ ೨೦೨೦ ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ.

ಕಲ್ಯಾಣ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಸಮಸ್ತ ಜನತೆಯ ಪರವಾಗಿ, ನಮ್ಮ ವಿನಯವಾಣಿ ಬಳಗದ ಪರವಾಗಿ ಹಿರಿಯ ಸಾಹಿತಿ ಡಿ.ಎನ್. ಅಕ್ಕಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವದು ಸಂತಸ ತಂದಿದೆ. ತಡವಾಗಿಯಾದರೂ ಗುರುತಿಸಿರುವದು ಹರ್ಷ ಮೂಡಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ಆತ್ಮೀಯರು ಫೋನಾಯಿಸಿ ಅಭಿನಂದನೆಗಳು ಸಲ್ಲಿಸುವ ಜೊತೆಗೆ ಎಂದೊ ದೊರೆಯಬೇಕಿದ್ದ ಪ್ರಶಸ್ತಿ ಇಂದು ದೊರೆತಿದೆ ಸರ್. ನಿಮಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಗೆ ಇನ್ನಷ್ಟು ಗೌರವ ಹೆಚ್ಚಾಯಿತು ಎಂಬ ನುಡಿಗಳನ್ನಾಡುತ್ತಿದ್ದಾರೆ. ಪ್ರಶಸ್ತಿ, ಗೌರವಾದರಗಳು ಮನುಷ್ಯನ ಸಾಮರ್ಥ್ಯ, ವ್ಯಕ್ತಿತ್ವದ ಮೇಲೆ ನೀಡುವಂತಹವು. ಪ್ರಶಸ್ತಿ ಬಂದಿದೆ ಎಂದು ಹಿಗ್ಗುವದು ಬೇಡ, ಬಂದಿಲ್ಲವೆಂದು ಕುಗ್ಗುವದು ಬೇಡ.
ಸಾಹಿತಿ, ಡಿ.ಎನ್.ಅಕ್ಕಿ.

Related Articles

Leave a Reply

Your email address will not be published. Required fields are marked *

Back to top button