SSC ಯಿಂದ 8000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, 20,200

ಕೇಂದ್ರ ಸರ್ಕಾರದ ಇಲಾಖೆಗಳು, ಸಚಿವಾಲಯಗಳಿಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಸ್ಟಾಫ್ ಸೆಲೆಕ್ಷನ್ ಕಮಿಷನ್ ಇತ್ತೀಚೆಗೆ 17 ಸಾವಿರಕ್ಕೂ ಹೆಚ್ಚು ಹುದ್ದೆ ಭರ್ತಿಗೆ ಸಿಜಿಎಲ್ ಪರೀಕ್ಷೆ ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಈಗ ಮತ್ತೊಂದು ಬಿಗ್ ನೋಟಿಫಿಕೇಶನ್ ಅನ್ನು ಪ್ರಕಟಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರ:
* ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್ ) ಸ್ಟಾಫ್
* ಹವಾಲ್ದಾರ್ ಇನ್ ಸಿಬಿಐಸಿ, ಸಿಬಿಎನ್
ಹುದ್ದೆಯ ಸಂಖ್ಯೆ:
* ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್ ) ಸ್ಟಾಫ್- 4887
* ಹವಾಲ್ದಾರ್ ಇನ್ ಸಿಬಿಐಸಿ, ಸಿಬಿಎನ್- 3439
ವಯೋಮಿತಿ:
* ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು.
* ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಹವಾಲ್ದಾರ್ ಇನ್ ಸಿಬಿಎನ್ (ಕಂದಾಯ ಇಲಾಖೆ) ಹುದ್ದೆಗಳಿಗೆ ಗರಿಷ್ಠ 25 ವರ್ಷ ಮೀರಿರಬಾರದು.
* ಹವಾಲ್ದಾರ್ ಇನ್ ಸಿಬಿಐಸಿ (ಕಂದಾಯ ಇಲಾಖೆ) ಮತ್ತು ಕೆಲವು ಎಂಟಿಎಸ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ಮೀರಿರಬಾರದು.
ವೇತನ:
5200-20200
ಅರ್ಜಿ ಶುಲ್ಕ:
100
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31-07-2024
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://ssc.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.