ಪ್ರಮುಖ ಸುದ್ದಿ
ಡೊನಾಲ್ಡ್ ಟ್ರಂಪ್ ಒಬ್ಬ ಅಜ್ಞಾನಿ – ಸಿದ್ರಾಮಯ್ಯ
ಡೊನಾಲ್ಡ್ ಟ್ರಂಪ್ ಒಬ್ಬ ಮೋದಿ ಇದ್ದಂತೆ – ಸಿದ್ರಾಮಯ್ಯ
ವಿವಿಡೆಸ್ಕ್ಃ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಜ್ಞಾನಿ ಎನಿಸುತ್ತಿದೆ. ಅಲ್ಲಾ ಭಾರತದ ಒಬ್ಬ ಪ್ರಧಾನಿ ನರೇಂದ್ರ ಮೋದಿಯನ್ನ ಭಾರತದ ಪಿತಾಮಹ ಅಂತಾನಲ್ರಿ ಅವನಿಗೆ ಜ್ಞಾನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ತಮ್ಮದೇ ಶೈಲಿಯಲ್ಲಿ ಅಮೇರಿಕಾದ ಅಧ್ಯಕ್ಷ ನೀಡಿದ ಹೇಳಿಕೆಗೆ ಛೇಡಿಸಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಜಯಂತಿ ಅಂಗವಾಗಿ ನಡೆದ ಸದ್ಭಾವನಾ ಯಾತ್ರಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಚೆಗೆ ವಿದೇಶದಲ್ಲಿ ಪ್ರಧಾನಿ ಮೋದಿಯವರ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಮೋದಿಯವರ ಕುರಿತು ಭಾರತದ ಪಿತಾಮಹಾರಾಗಿ ಮೋದಿಜಿ ಹೊರಹೊಮ್ಮಿದ್ದಾರೆ. ಅವರಿಂದ ಅವರ ಅಭಿವೃದ್ಧಿ ಅಲ್ಲದೆ ಬೇರೆ ದೇಶಕ್ಕೂ ಅವರ ನಡೆ ಮಾದರಿಯಾಗಿದೆ ಎಂದಿದ್ದರು.