ಶನಿವಾರ ವಯೋ ನಿವೃತ್ತಿ ಸಮಾರಂಭ – ಹಾಸ್ಯ ಕಲಾವಿದರಾದ ಮಹಾಮನಿ, ಡಿಗ್ಗಿ ಆಗಮನ
ಹಾಸ್ಯ ಕಲಾವಿದರಾದ ಮಹಾಮನಿ, ಡಿಗ್ಗಿ ಆಗಮನ

ವಯೋ ನಿವೃತ್ತಿ ಸಮಾರಂಭ ಇಂದು
ಹಾಸ್ಯ ಕಲಾವಿದರಾದ ಮಹಾಮನಿ, ಡಿಗ್ಗಿ ಆಗಮನ
yadgiri, ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುದೀರ್ಘ ೨೧ ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಲ್ಲನಗೌಡ ಬಿರಾದಾರ ಅವರಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಹಳೆ ವಿದ್ಯಾರ್ಥಿಗಳ ಸಂಘದಿAದ ಸನ್ಮಾನ ಸಮಾರಂಭ ಹಾಗೂ ಹಾಸ್ಯ ಕಲಾವಿದರಿಂದ ಮನೋರಂಜನೆ ಕಾರ್ಯಕ್ರಮವನ್ನು ಶನಿವಾರ ಬೆಳಗ್ಗೆ ೧೦ ಗಂಟೆಗೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಹಿರಿಯ ಸದಸ್ಯ ಅಮರೇಶ ಗೋಲಗೇರಿ ಹೇಳಿದ್ದಾರೆ.
ತಾಲೂಕಿನ ದೋರನಹಳ್ಳಿ ಗ್ರಾಮದ ಗ್ರಾಪಂ ಗ್ರಂಥಾಲಯದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾಧ್ಯಮ ಪ್ರಕಟಣೆಗೆ ಮಾಹಿತಿ ನೀಡಿದ ಅವರು, ನಮ್ಮ ದೋರನಹಳ್ಳಿ ಗ್ರಾಮದಲ್ಲಿ ಒಂದೇ ಒಂದು ಪ್ರೌಢಶಾಲೆ ಇದ್ದು ಇಲ್ಲಿಯೇ ದೋರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಕ್ಕಳು ಅಭ್ಯಾಸ ಮಾಡಿದ್ದಾರೆ. ಬಿರಾದಾರ ಸರ್ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಇಲ್ಲಿ ಕನ್ನಡ ವಿಷಯವನ್ನು ಬೋಧಿಸಿ ದಾರಿ ದೀಪವಾಗಿದ್ದಾರೆ.
ಅಂತಹ ಗುರುವಿನ ನಿವೃತ್ತಿಯನ್ನು ಗ್ರಾಮದ ಮತ್ತು ಪ್ರೌಢಶಾಲೆಯ ಹಳೆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಹಳೆ ವಿದ್ಯಾರ್ಥಿಗಳ ಸಂಘದಿAದ ಗೌರವಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ ಮತ್ತು ಗುಂಡಣ್ಣ ಡಿಗ್ಗಿ ಆಗಮಿಸಲಿದ್ದು, ಹಾಸ್ಯದ ಬುಗ್ಗೆ ಹರಿಯಲಿದೆ ಕಾರಣ ಸಾರ್ವಜನಿಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ದೋರನಹಳ್ಳಿ ಹಿರೇಮಠದ ಅಭಿನವ ಮಹಾಂತೇಶ್ವರ ಶಿವಾಚಾರ್ಯರು, ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಸಿದ್ದಾರೂಢ ಮಠದ ಭೀಮಾಶಂಕರಾನAದ ಅವಧೂತರ ನೇತೃತ್ವ, ತಾಲೂಕು ಶಿಕ್ಷಣ ಸುಧಾರಣಾ ಸಮಿತಿ ಶಹಾಪುರದ ಅಧ್ಯಕ್ಷರಾದ ಶಾಂತಗೌಡ ಪಾಟೀಲರು ಉದ್ಘಾಟಕರಾಗಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ತಾಪಂ ಇಓ ಬಸವರಾಜ ಶರಬೈ, ಮದ್ರಿಕಿ ಪ್ರೌಢಶಾಲಾ ಮುಖ್ಯಗುರು ಅಮರೇಶ ಕೆ, ದೋರನಹಳ್ಳಿ ಪ್ರೌಢಶಾಲಾ ಮುಖ್ಯಗುರು ಶಾಂತಪ್ಪ ಕೆರಟಗಿ, ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ದೊರೆ, ಉಪಾಧ್ಯಕ್ಷ ಈರಣ್ಣ ಕಸನ್, ಪಿಡಿಓ ದೇವರಾಜ ಮೌರ್ಯ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ನಾಗಯ್ಯ ಗುತ್ತೇದಾರ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ ಎಂದು ವಿವರಿಸಿದ್ದಾರೆ.