ಪಂಜರದಲ್ಲಿ ಅದೆಷ್ಟು ಇದ್ದಾವೋ ಗಿಣಿಗಳು..! ಹಾರಿದ ಗಿಣಿಗಳಿಗೆ ರಾರಾ ಎನ್ನಲಿದೆಯೇ ರಾ”ಗಿಣಿ”
“ರಾಗಿ” ರುಬ್ಬಿದ ಸಿಸಿಬಿ ಚಂದನವನ ಕೋಲಾಹಲ.!
ಅಮಲಿನಲ್ಲಿ ಹಾಡಿತು ರಾರಾ “ಗಿಣಿ”
ಪಂಜರದಲ್ಲಿ ಅದೆಷ್ಟು ಇದ್ದಾವೋ ಗಿಣಿಗಳು..!
ವಿವಿ ಡೆಸ್ಕ್ಃ ಮಾದಕ ಜಾಲ ಸೃಷ್ಟಿಸಿರೋ ಆತಂಕ ಇಡಿ ಚಂದನವನ ನಡುಗಿಸಿದೆ. ಇದೀಗ ನಟಿ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಿದ್ದು, ತುಪ್ಪದ ಬೆಡಗಿಯ ಆಪ್ತ ರವಿಶಂಕರ ಮತ್ತು ನಟಿ ಸಂಜನಾಳ ಆಪ್ತ ರಾಹುಲ್ ಬಂಧಿಸಿ ಸಾಕಷ್ಟು ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು, ರಾಗಿಣಿ ಡ್ರಗ್ಸ್ ಸೇವನೆ ಮಾಡಿರುವ ಕುರಿತು ಈಗಾಗಲೇ ರಾಗಿಣಿ ಆಪ್ತ ರವಿಶಂಕರ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಡ್ರಗ್ಸ್ ಲೊಕದ ಬಹುದೊಡ್ಡ ಚೈನ್ ಹೊಂದಿರುವ ರವಿಶಂಕರ್ ಹಾಗೂ ರಾಹುಲ್ ಎಂಬ ಕುಳಗಳಿಂದ ಇನ್ನು ಚಂದನವನಕ್ಕೆ ಕಳಂಕ ತಪ್ಪಿದ್ದಲ್ಲ.
ತುಪ್ಪದ ಬೆಡಗಿ ಪಂಜರದಲ್ಲಿ ಅದಿನ್ನೆಷ್ಟು ಗಿಣಿಗಳಿವೆ ಯಾರಿಗೆ ಗೊತ್ತು. ಸಿಸಿಬಿ ಪೊಲೀಸರು ರುಬ್ಬಿದ ರಾಗಿ ಹಿಟ್ಟು ತಿಂದವರಾರು ಎಂಬುದು ಈಗ ಬಹಿರಂಗವಾಗಿ ಕಕ್ಕಲೇಬೆಕಾಗಿದೆ. ಹೀಗಾಗಿ ಚಂದನವನ ರಾಗಿಣಿ ಇನ್ಯಾರ್ಯರ ಹೆಸರು ಕಕ್ಕುತ್ತಾಳೋ ಎಂಬ ಆತಂಕದಲ್ಲಿ ಕೆಲವರು ಮನೆ ಬಿಟ್ಟು ಬೇರೆಲ್ಲೋ ಕಾಣದ ಸ್ಥಳಗಳಲ್ಲಿ ರಹಸ್ಯವಾಗಿ ಕುಳಿತು ಗಮನಿಸುತ್ತಿದ್ದಾರೆ.
ಸಿಸಿಬಿಗೆ ಸಿಕ್ಕ ಪಂಜರದಿಂದ ಅದೆಷ್ಟು ಗಿಳಿಗಳು ಹಾರಿ ಹೋಗಿವೆ ಗೊತ್ತಿಲ್ಲ. ಆದರೆ ಅವೆಲ್ಲವನ್ನು ಗಾಳ ಹಾಕಿ ಹಿಡಿದು ತರುವಲ್ಲಿ ಸಿಸಿಬಿ ಪೊಲೀಸರು ಮಾತ್ರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕ ಇಂಟಲಿಜೆನ್ಸ್ ಕಾರ್ಯ ಮಾಡಬೇಕಿದೆ ಅಷ್ಟೆ.
ದಿನ ಬೆಳಗಾದರೆ ಮತ್ಯಾರು ಸಿಸಿಬಿ ಬಲೆಗೆ ಸಿಲುಕುವರೋ ಕಾಯುವಂತಾಗಿದೆ. ಈಗಾಗಲೇ ನಟಿ ರಾಗಿಣಿಯನ್ನು 3 ದಿನ ಕಸ್ಟಡಿಗೆ ತೆಗೆದುಕೊಂಡ ಸಿಸಿಬಿ ಪೊಲೀಸರು ಇನ್ನೇನು ರಹಸ್ಯ ಹೊರಬರಲಿದೆ ಎಂಬ ಡವಡವ ಚಂದನವನದಲ್ಲಿ ಶುರುವಾಗಿದೆ.