ಪ್ರಮುಖ ಸುದ್ದಿ

ದೋರನಹಳ್ಳಿಃ ಸಮಗ್ರ ತನಿಖೆಗೆ ಲಿಖಿತ ಭರವಸೆ ಧರಣಿ ಅಂತ್ಯ

ದೋರನಹಳ್ಳಿ ಗ್ರಾಪಂನಲ್ಲಿ ವ್ಯಾಪಕ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಕೈಗೊಂಡಿದ್ದ ಧರಣಿ ಅಂತ್ಯ

ಶಹಾಪುರಃ ದೋರನಹಳ್ಳಿ ಗ್ರಾಮ ಪಂಚಾಯತನಲ್ಲಿ ವಿವಿಧ ವಸತಿ ಯೋಜನೆ, 14ನೇ ಹಣಕಾಸು, ಉದ್ಯೋಗಖಾತ್ರಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಕೂಡಲೇ ತನಿಖೆಗೆ ಆಗ್ರಹಿಸಿ ಕಳೆದ ಎರಡು ದಿನ ಇಲ್ಲಿನ ದಲಿತ ಸಂರಕ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ದೋರನಹಳ್ಳಿ ನೇತೃತ್ವದಲ್ಲಿ ಗ್ರಾಪಂ ಮುಂದೆ ಫೆ.24 ರಿಂದ ಅನಿರ್ಧಿಷ್ಟವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಾಪಂ ಅಧ್ಯಕ್ಷ ನಾಗಪ್ಪ ಪೂಜಾರಿ ಮತ್ತು ಇಓ ಜಗನ್ನಾಥ ಮೂರ್ತಿ, ಸಿಪಿಐ ಹನುಮರಡ್ಡೆಪ್ಪ ಅವರು ಉಪವಾಸ ನಿರತರ ಜೊತೆಗೆ ಮಾತುಕತೆ ನಡೆಸಿ ಬೇಡಿಕೆಗೆ ಪೂರಕವಾಗಿ ಸ್ಪಂಧಿಸುವ ಕುರಿತು ಲಿಖಿತ ಭರವಸೆ ನೀಡಿರುವ ಹಿನ್ನೆಲೆ ಧರಣಿ ನಿರತರು ಧರಣಿ ಸತ್ಯಾಗ್ರಹವನ್ನು ವಾಪಸ್ ಪಡೆದರು.

ಕಳೆದ ಎರಡು ದಿನದಿಂದ ಮುಂದುವರೆದಿದ್ದ ಧರಣಿ ಬುಧವಾರ ಅಂತ್ಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಮಾತನಾಡಿ, ದೋರನಹಳ್ಳಿ ಗ್ರಾಪಂನಲ್ಲಿ ಕಳೆದ 2015 ರಿಂದ 2020ರ ವರೆಗೆ ಬಸವ ವಸತಿ, ಇಂದಿರಾ ಆವಾಸ್, ಅಂಬೇಡ್ಕರ್, ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಮತ್ತು 14ನೇ ಹಣಕಾಸು ಯೋಜನೆ, ಉದ್ಯೋಗ ಖಾತ್ರಿ ಯೋಜನೆಯಲ್ಲೂ ಅಕ್ರಮ ಎಸಗಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಅಲ್ಲಿವರೆಗೂ ಧರಣಿ ಸತ್ಯಾಗ್ರಹ ಕೈಬಿಡುವದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಅಲ್ಲದೆ ವಸತಿ ಯೋಜನೆಯಡಿ ಈಗಾಗಲೇ ಸಿದ್ಧಪಡಿಸಿದ ಆಯ್ಕೆ ಪಟ್ಟಿ ರದ್ದುಗೊಳಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಾಗಬೇಕು ಎಂದು ಆಗ್ರಹಿಸಿದರು. ಈ ಕುರಿತು ಸಮಗ್ರ ತನಿಖೆ ನಡೆಸಲು ಅಧಿಕಾರಿಗಳ ಲಖಿತ ಭರವಸೆ ನೀಡಿರುವ ಕಾರಣ ತಾತ್ಕಾಲಿಕವಾಗಿ ಧರಣಿ ಹಿಂಪಡೆದಿದ್ದೇವೆ ಎಂದು ಧರಣಿನಿರತರು ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಸಮರ್ಪಕ ಸ್ಪಂಧನೆ ದೊರೆಯದಿದ್ದರೆ ಮತ್ತೇ ಉಪವಾಸ ಧರಣಿ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಧರಣಿ ನಿರತರಿಗೆ ಎಳೆ ನೀರು ಕುಡಿಸುವ ಮೂಲಕ ಧರಣಿ ಸತ್ಯಾಗ್ರಹಕ್ಕೆ ಅಂತ್ಯವಾಡಲಾಯಿತು.

ಈ ಸಂದರ್ಭದಲ್ಲಿ ನಿಂಗಪ್ಪ ಕಸನ್, ಅರುಣ್ ಸೈದಾಪೂರ್, ಶರಣು ಬೋಳಾರಿ, ಶಿವರಾಯ ಬಡಿಗೇರ್, ಮಲ್ಲಿಕಾರ್ಜುನ್ ಕಸನ್, ರಾಜು ಅನವಾರ, ಭೀಮರಾಯ ಯಾಳಗಿ, ಮಲ್ಲಿಕಾರ್ಜುನ ಕುದರಿ, ಹಣಮಂತ ಕಸನ್, ತಿಪ್ಪಣ್ಣ ಕಸನ್ ಇತರರಿದ್ದರು.

 

Related Articles

Leave a Reply

Your email address will not be published. Required fields are marked *

Back to top button