ಹಗಲಿನಲ್ಲಿ ಬೆಳಕು ನೀಡಿ ರಾತ್ರಿ ಮಲಗುವ ವಿದ್ಯುತ್ ದೀಪ
ಹಗಲು ಪ್ರತ್ಯಕ್ಷ ರಾತ್ರಿ ಮಾಯ
ಯಾದಗಿರಿ, ಶಹಾಪುರಃ ನಗರಸಭೆ ನಿರ್ಲಕ್ಷದಿಂದ ಇಲ್ಲಿನ ಸೇಂಟ್ ಪೀಟರ್ ಶಾಲೆಯ ಮುಂದೆ ರಸ್ತೆ ಬದಿ ಇರುವ ವಿದ್ಯುತ್ ದೀಪವೊಂದು ಹಗಲಿನಲ್ಲಿ ಉರಿದು ರಾತ್ರಿ ಆಫ್ ಆಗುತ್ತಿದೆ. ಈ ವಿದ್ಯುತ್ ದೀಪದ ನಡೆ ಕಂಡು ಜನ ನಿಬ್ಬೆರಗಾಗಿದ್ದಾರೆ.
ಕಾರಣ ಬೆಳಗ್ಗೆ ಜನ ವಾಕಿಂಗ್ ಹೋಗುವ ವೇಳೆ 6 ಗಂಟೆಗೆ ದೀಪ ಬೆಳಕು ನೀಡುತ್ತದೆ. ಮತ್ತೆ ಸಂಜೆ 6 ಗಂಟೆಗೆ ಅಂದ್ರೆ ಕತ್ತಲಾಗುವ ಮುಂಚೆ ಈ ವಿದ್ಯುತ್ ದೀಪ ಆಫ್ ಆಗಲಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೆ ಕ್ರಮಕೈಗೊಂಡಿಲ್ಲ ಎಂದು ಬಡಾವಣೆ ನಾಗರಿಕರು ದೂರಿದ್ದಾರೆ.
ಸಾಮಾನ್ಯವಾಗಿ ನಿತ್ಯ ಸಂಜೆ ಸುಮಾರಿಗೆ ವಿದ್ಯುತ್ ದೀಪಗಳು ಆನ್ ಆಗಿ ರಾತ್ರಿ ಪೂರ ಬೆಳಕು ನೀಡಿ ಬೆಳಗಿನಜಾವ 6 ಗಂಟೆಗೆ ಆಫ್ ಆಗುತ್ತವೆ. ಆದರೆ ಇಲ್ಲಿನ ದೀಪ ಬೆಳಗ್ಗೆ ಆನ್ ಆಗಿ ಸಂಜೆ ಬಂದ್ ಆಗುತ್ತಿದೆ ಎಂದು ಜನರು ಅಣಕಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ವಿದ್ಯುತ್ ದೀಪ ಸರಿಪಡಿಸಬೇಕು. ಸಂಜೆ 6 ಗಂಟೆಯಿಂದ ಬೆಳಗಿನ 6 ಗಂಟೆವರೆಗೆ ಬೆಳಕು ನೀಡುವಂತೆ ದುರಸ್ತಿಗೊಳಿಸಬೇಕೆಂದು ಪಾಪಣ್ಣ ಆಗ್ರಹಿಸಿದ್ದಾರೆ. ಹಗಲಿನಲ್ಲಿ ವಿದ್ಯುತ್ ದೀಪ ಉರಿಯುತ್ತಿರುವದರಿಂದ ಅನವಶ್ಯಕವಾಗಿ ವಿದ್ಯುತ್ ಖರ್ಚಾಗುತ್ತಿದೆ ಎಂದು ಬಡಾವಣೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಅನುಕೂಲಕ್ಕಾಗಿ ಕೂಡಲೇ ವಿದ್ಯತ್ ದೀಪ ಸಂಜೆಯಿಂದ ರಾತ್ರಿ ಪೂರ್ಣ ಬೆಳಕು ನೀಡುವಂತೆ ದುರಸ್ತಿ ಮಾಡಬೇಕೆಂದು ಬಡಾವಣೆ ನಾಗರಿಕರು ಒತ್ತಾಯಿಸಿದ್ದಾರೆ.