ಟ್ರಾಫಿಕ್ ನಲ್ಲಿ ಸಿಲುಕಿದ ಅಗ್ನಿಶಾಮಕ ದಳ ವಾಹನ
ಟ್ರಾಫಿಕ್ ನಲ್ಲಿ ಸಿಲುಕಿದ ಅಗ್ನಿಶಾಮಕ ದಳ ವಾಹನ
ಕಲಬುರ್ಗಿಃ ಬೆಂಕಿ ನಂದಿಸಲು ಹೊರಟಿದ್ದ ಅಗ್ನಿ ಶಾಮಕ ದಳದ ವಾಹನವೊಂದು ನಗರದ ಹಳೇ ಆನಂದ ಹೊಟೇಲ್ ವೃತ್ತದಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿದ್ದು ಪರದಾಡುವಂತಾದ ಘಟನೆ ನಡೆಯಿತು.
ಸುಮಾರು 8 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಆಗಿದ್ದು, ಸಾರ್ವಜನಿಕರು ಸಹ ಟ್ರಾಫಿಕ್ ಸಮಸ್ಯೆಗೆ ಆಕ್ರೋಶ ವ್ಯಕ್ತಪಡಿದರು.
ಪೂರ್ವಕ್ಕೆ ಗಾರ್ಡನ್ ಗೆ ಹೋಗುವ ಮಾರ್ಗ ಪಶ್ಚಿಮಕ್ಕೆ ಎಸ್.ಬಿ.ಕಾಲೇಜು ರಸ್ತೆ ಉತ್ತರಕ್ಕೆ ಅಪ್ಪನ ಗುಡಿ ರಸ್ತೆ ದಕ್ಷಿಣಕ್ಕೆ ತಿಮ್ಮಾಪುರಿ ಸರ್ಕಲ್ ರಸ್ತೆ ಮಾರ್ಗವಿದ್ದು, ಆನಂದ ಹೊಟೇಲ್ ಹತ್ತಿರದ ವೃತ್ತದಲ್ಲಿ ವಾಹನ ಸವಾರರ ಬೇಕಾಬಿಟ್ಟಿ ಚಾಲನೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿದೆ.
ವೃತ್ತದಲ್ಲಿಯೇ ಪೊಲೀಸ್ ಚೌಕಿ ಇದ್ದರೂ ಟ್ರಾಫಿಕ್ ಕಂಟ್ರೋಲ್ ಗೆ ಮುಂದಾಗದಿರುವುದು ಸೋಜಿಗವಾಗಿದೆ.
ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗಳೂ ಈ ಕುರಿತು ಮಾಹಿತಿ ಪಡೆದು ಸ್ಥಳದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಸಮರ್ಪಕ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.