ಪ್ರಮುಖ ಸುದ್ದಿ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಧರಣಿ

ಗ್ರಾಪಂ ನೌಕರರಿಗೆ ಸೇವಾ ಭದ್ರತೆ ಒದಗಿಸಿಃ ತೋಟದಮನಿ

ಯಾದಗಿರಿಃ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಗ್ರಾಪಂ ನೌಕರರು ಬುಧವಾರ ಜಿಲ್ಲೆಯ ಶಹಾಪುರ ನಗರದ ತಾಲೂಕು ಪಂಚಾಯತಿ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೈಲಾಲ್ ತೋಟದಮನಿ, ಗ್ರಾಮ ಪಂಚಾಯತಿ ನೌಕರರು ಸಂಕಷ್ಟದಲ್ಲಿ ಕರ್ತವ್ಯ ನಿರ್ವಹಿಸಿದಂತಾಗುತ್ತಿದೆ. ಗ್ರಾಪಂ ನೌಕರರಿಗೆ ಸೇವಾ ಭದ್ರತೆ ಅಗತ್ಯವಿದ್ದು, ಸರ್ಕಾರ ಕೂಡಲೇ ಸೇವಾ ಭದ್ರತೆ ಒದಗಿಸುವ ಕೆಲಸ ಮಾಡಬೇಕು.

ಅಲ್ಲದೆ ಕರ್ತವ್ಯ ನಿರ್ವಹಣೆಗೆ ಸೂಕ್ತ ನಿಯಮವಳಿಗಳನ್ನು ನೀಡಬೇಕಿದೆ. ಮತ್ತು ಶೈಕ್ಷಣಿಕ ಅರ್ಹತೆ ಮೇಲೆ ಅವರಿಗೆ ಗ್ರೇಡ್-2 ಬಡ್ತಿ ಸೌಲಭ್ಯ ಕಲ್ಪಸುವ ಮೂಲಕ ಅವರಿಗೂ ಸಮಾಜದಲ್ಲಿ ಉತ್ತಮ ಬದುಕು ಸಾಗಿಸಲು ಅನುವು ಮಾಡಿಕೊಡಬೇಕು. ಅವರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು.

ಸರ್ಕಾರದ ಆದೇಶದಂತೆ ಗ್ರಾಪಂ ನೌಕರರಿಗೆ ಸರ್ಕಾರ ಈಎಫ್‍ಎಂಎಸ್ ನೀಡಬೇಕು. ಮತ್ತು ಎಸ್ಸೆಸ್ಸೆಲಿಸ ಪಾಸಾದ ಗ್ರಾಪಂ ನೌಕರರಿಗೆ ಗ್ರೇಡ್ 2 ಎಂದು ಬಡ್ತಿ ಸೌಲಭ್ಯ ಕಲ್ಪಿಸಬೇಕು. ನಗರ ಸಭೆ ನೌಕರರಿಗೆ ಜಾರಿಗೊಳಿಸಿದಂತ ಸೇವಾ ನಿಯಮವಳಿಗಳನ್ನು ಜಾರಿಗೊಳಿಸಬೇಕು.

ಅಲ್ಲದೆ ಮುಖ್ಯವಾಗಿ ಎಮ್.ಎಸ್.ಸ್ವಾಮೀ ಆಯೋಗ ನೀಡಿದ ವರದಿ ಜಾರಿಗೊಳಿಸುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿದರು. ಸಿಯುಐಟಿ ಜಿಲ್ಲಾಧ್ಯಕ್ಷ ಮಲ್ಲಣ್ಣ ರಸ್ತಾಪುರ, ಬಸವರಾಜ ದೊರಿ, ಗಾಲಿಬಸಾಬ ಬೆಳೆಗೇರಿ, ಸಿದ್ದು ಮೂಡಬೂಳ, ದಾವಲಸಾಬ ನದಾಫ್, ಎಸ್.ಎಂ.ಸಾಗಾರ್, ಮಲ್ಲಯ್ಯ ಪೋಲಂಪಲ್ಲಿ, ರಾಜೇಶ್ವರಿ, ಮುನಿಯಪ್ಪ ಕುರುಕುಂದಿ, ಬಸಣ್ಣ ಹೂಗಾರ, ಮಲ್ಲಿಕಾರ್ಜುನ ಕಕ್ಕಸಗೇರಾ, ಮಡಿವಾಳಮ್ಮ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button