ವಿನಯ ವಿಶೇಷ

ನೀರು & ಆಲ್ಕೋಹಾಲ್ ನಿಂದಲೇ ಓಡಲಿವೆ ಕಾರು!

ಲೇಖನ – ಡಾ. ಕಾಮಾನಿ. ಕೆ. ಕೆ.
ಆರ್ಥಿಕ ತಜ್ಞರು

ನೀರು ಮತ್ತು ಆಲ್ಕೋಹಾಲ್ ಚಾಲಿತ ಜಾಗತಿಕ ಮೊದಲ ಪಿಸ್ಟನ್ ಇಂಜಿನ್ – ಇಸ್ರೇಲ್

ಇಸ್ರೇಲ್ ದೇಶದ ಎವುದ್ ಶೆಮುಲಿ ತನ್ನ ಮಕ್ಕಳೊಂದಿಗೆ “ನೀರು ಮತ್ತು ಆಲ್ಕೋಹಾಲ್ ಮಿಶ್ರಣದ ಇಂಧನ ಬಳಸಿ ಸ್ವಯಂ ಚಾಲಿತ ಪಿಸ್ಟನ್ ಇಂಜಿನ್” ಅಭಿವೃದ್ಧಿಪಡಿಸಿದ್ದಾರೆ. ಸುಮಾರು 70% ನೀರು ಮತ್ತು 30% ಯಾವುದೇ ಆಲ್ಕೋಹಾಲ್ ಮಿಶ್ರಣ ಹೊತ್ತಿ ಉರಿಯುವುದರೋಂದಿಗೆ ಪಿಸ್ಟನ್ ಚಾಲನೆಗೋಳ್ಳುತ್ತದೆ. ಇದರ ವೇಗೋತ್ಕರ್ಷ ಆರ್ ಪಿ ಎಮ್ ಪ್ರಸ್ತುತ ಗ್ಯಾಸೋಲಿನ್ ಡೀಸೆಲ್ ಇಂಜಿನ್ ಗಳಿಗಿಂತ 60% ಹೆಚ್ಚು ದಕ್ಷತೆ ಇದ್ದು ಸುಮಾರು 50% ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸಬಹುದಾಗಿದೆ. ಅತಿ ಹೆಚ್ಚಿನ ದಕ್ಷತೆ, ಶುದ್ಧ ಶಕ್ತಿ, ಶೂನ್ಯ ಮಾಲಿನ್ಯ ನಿಯಂತ್ರಣದ ಜಾಗತಿಕ ಮೊದಲ ಸಂಶೋಧನೆ ಎಂದು ಇಸ್ರೇಲ್ ನ ತಂತ್ರಜ್ಞಾನಿಗಳು ಜೋರುಸಲ್ಲಂನಲ್ಲಿ ಪ್ರಕಟಪಡಿಸಿದ್ದಾರೆ.

ಲೇಖಕರು – ಡಾ. ಕಾಮಾನಿ. ಕೆ. ಕೆ.
ಆರ್ಥಿಕ ತಜ್ಞರು

ಗೌಪ್ಯವಾಗಿ ಎವುದ್ ಶೆಮುಲಿ ಸುಮಾರು 6 ವರ್ಷಗಳಿಂದ ಸತತ ಪರಿಶ್ರಮದಿಂದ ನಿರಂತರ ಸಂಶೋಧನೆಯನ್ನು ಖಾತ್ರಿ ಮಾಡಿಕೊಂಡು ಮೆ-ಮಾನ್ ಕಂಪನಿಯೊಂದಿಗೆ ತಾಂತ್ರಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತಾವು ವಿನ್ಯಾಸ ಮಾಡಿದ ಇಂಜಿನ್ ತಂತ್ರಜ್ಞಾನವನ್ನು ವಿವಿಧ ಉಪಕರಣಗಳಿಗೆ, ಕಾರು, ಜನರೇಟರ್ ಮುಂತಾದ ಉಪಕರಣಗಳಿಗೆ ಅಳವಡಿಸಿಕೊಳ್ಳಬಹುದಾಗಿದೆ ಎಂದು ಮೆ-ಮಾನ್ ಸಂಸ್ಥೆ ಪ್ರಕಟಪಡಿಸಿದೆ.

ಇಸ್ರೇಲ್ ಈ ಪಳೆಯುಳಿಕೆ ಇಂಧನಗಳ ಬದಲಾಗಿ ಈ ವಿನ್ಯಾಸದ ಪಿಸ್ಟನ್ ಪರಿವರ್ತನೆ ಜಾಗತಿಕ ಮಟ್ಟದಲ್ಲಿ ಶುದ್ಧ ಇಂಧನ, ಶೂನ್ಯ ಮಾಲಿನ್ಯ, ಕಡಿಮೆ ಖರ್ಚು, ಸುಗಮ ಬದುಕಿನ ಅಸಾಧಾರಣ ಪರಿಸರ ಸ್ನೇಹಿ ಸಂಶೋಧನೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಲಿದೆ. ಸಮಯಾಧಾರಿತ ತಂತ್ರಜ್ಞಾನದ ಬಳಕೆ, ವಿನ್ಯಾಸಗಳ ತಯಾರಿಕೆ, ತಂತ್ರಜ್ಞಾನದ ಆಮದು-ರಫ್ತಿನ ಕಂಪನಿಗಳ ಹಕ್ಕುಗಳನ್ನು ಹಣ ತೊಡಗಿಸುವ ಅಂತರಾಷ್ಟ್ರೀಯ ಸಂಸ್ಥೆಗಳ ಒಪ್ಪಂದಕ್ಕೆ ಕಾಯ್ದಿರಿಸಿದೆ.

ಪಳೆಯುಳಿಕೆ ಇಂಧನಗಳ ಮೇಲೆ ಸಂಪೂರ್ಣ ಅವಲಂಬಿತ ಭಾರತ ದೇಶಕ್ಕೆ ತುಂಬಾ ಸಹಕಾರಿಯಾಗಲಿದೆ. ಸ್ವಯಂಚಾಲಿತ ಇಂಧನಗಳಿಗೆ ಸುಲಭ ರೂಪದಲ್ಲಿ ನೀರು ಮತ್ತು ಆಲ್ಕೋಹಾಲ್ ಕಚ್ಚಾ ವಸ್ತುಗಳು ಪ್ರಕೃತಿ ಸಹಜ ಸಂಪನ್ಮೂಲಗಳಾಗಿವೆ. ತೈಲ ಉತ್ಪನ್ನಗಳ ಅರ್ಧದಷ್ಟು ದೇಶದ ಉತ್ಪನ್ನ ಆಮದು ಖರ್ಚು ಉಳಿತಾಯದಲ್ಲಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಸುವರ್ಣ ಪಥ. ಆರ್ಥಿಕ ಲಾಭ, ಸಮಾಜದ ಸುಧಾರಣೆ, ಜನರ ಸ್ಥಿತಿಗತಿಗಳು ಸಮಾನತೆಯ ಬದುಕಿಗೆ ನಾಂದಿ ಆಗಬಹುದು. ಇಂಧನಗಳ ಕೊರತೆಯ ಬೇಗೆಯಲ್ಲಿ ಬೇಯುತ್ತಿರುವ ಭಾರತಕ್ಕೆ ಈ ಸಂಶೋಧನೆ ಬದುಕಿಗೆ ಬೆಳಕಾಗಲಿದೆ.
ಭಾರತದಲ್ಲಿ ನೀರು- ಆಲ್ಕೋಹಾಲ್ 70:30 ಅನುಪಾತದ ಇಂಧನ ಸೂತ್ರದ ಪಿಸ್ಟನ್ ತಯಾರಿಕೆ ವಾಹನ ತಯಾರಿಕ ಘಟಕಗಳಲ್ಲಿ ತ್ವರಿತವಾಗಿ ಆರಂಭಿಸುವುದು ಸೂಕ್ತ.

Related Articles

Leave a Reply

Your email address will not be published. Required fields are marked *

Back to top button