ಪ್ರಮುಖ ಸುದ್ದಿ

ರಾಜ್ಯದ ಆಡಳಿತ ಯಂತ್ರ ಸುಧಾರಿಸಿಲ್ಲಃ ಶಾಸಕ ಡಾ.ಮಾಲಕರಡ್ಡಿ ಆಕ್ರೋಶ

ಶಹಾಪುರಃ ಪಂಚಾಯತ್ ರಾಜ್ ಕಚೇರಿಗೆ ಡಾ.ಮಾಲಕರಡ್ಡಿ ಭೇಟಿ

ಅಸ್ವಚ್ಛತೆ ಕಂಡು ಡಾ.ಮಾಲಕರಡ್ಡಿ ಗರಂ

 ಯಾದಗಿರಿಃ ರಾಜ್ಯದಲ್ಲಿ ಆಡಳಿತ ಯಂತ್ರ ಸುಧಾರಿಸುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸರಿಯಾಗಿ ಸಹಕರಿಸುತಿಲ್ಲ. ಪರಿಣಾಮ ಅಭಿವೃದ್ಧಿಗೆ ಹಿನ್ನಡೆಯಾಗಿ ಜನರ ಸಮಸ್ಯೆಗಳಿಗೆ ಪರಿಹಾರ ದೊರುಕುತ್ತಿಲ್ಲ ಎಂದು ಯಾದಗಿರಿ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಕಳವಳ ವ್ಯಕ್ತಪಡಿಸಿದರು.

ಗುರುವಾರ ಜಿಲ್ಲೆಯ ಶಹಾಪುರ ನಗರದದ ಪಂಚಾಯತ್ ರಾಜ್ ಇಂಜಿನೀಯರಿಂಗ್ ಕಚೇರಿಗೆ ಆಕಸ್ಮಿಕ ಭೇಟಿ ನೀಡಿ, ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ.

ಯಾವುದೇ ಇಲಾಖೆಯ ಅಧಿಕಾರಿ, ಸಿಬ್ಬಂದಿ ತಮ್ಮ ಜವಬ್ದಾರಿ ಅರಿತು ಕೆಲಸ ಮಾಡಿದಾಗ ಮಾತ್ರ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯವಿದೆ ಎಂದ ಅವರು, ನಂತರ ಕಚೇರಿ ಸಿಬ್ಬಂದಿಗಳ ವಿವರ ಪಡೆದು ತಮ್ಮ ಮತಕ್ಷೇತ್ರದಲ್ಲಿ ಇಲಾಖೆವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಕುರಿತು, ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗದಿತ ಅವಧಿಯೊಳಗೆ ಕೆಲಸಗಳನ್ನು ಮುಗಿಸಲು ಸೂಚಿಸಿದರು.

ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಗೆ ತರಾಟೆ, ದಕ್ಷಿಣ ಕನ್ನಡ ಜಿಲ್ಲೆ ಕಡೆ ಹೋಗಿ ನೋಡ್ರಿ…

ಇಲ್ಲಿನ ಪಂಚಾಯತ ರಾಜ್ ಕಚೇರಿಯಲ್ಲಿ ಸ್ವಚ್ಛತೆ ಇಲ್ಲದಿರುವದನ್ನು ಗಮನಿಸಿದ ಶಾಸಕರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯು ಜರುಗಿತು. ಒಮ್ಮೆ ಇಲ್ಲಿನ ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಆಗ ನಿಮಗೆ ಕಚೇರಿಗಳನ್ನು ಯಾವ ರೀತಿ ಸ್ವಚ್ಛತೆ ಕಾಪಾಡಬೇಕು ಹೇಗೆ ನಿರ್ವಹಿಸಬೇಕೆಂದು ತಿಳಿಯುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಸೂಗುರಡ್ಡಿ, ರವೀಂದ್ರಗೌಡ ಯಾದಗಿರಿ, ಅರುಣಕುಮಾರ ಕುಲಕರ್ಣಿ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button