ಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ನಿಧನ
ರವಿವಾರ ಮದ್ಯಾಹ್ನ 3 ಕ್ಕೆ ಚಿತಾಪುರದಲ್ಲಿ ಅಂತ್ಯಕ್ರಿಯೆ
ಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ನಿಧನ
ರವಿವಾರ ಮದ್ಯಾಹ್ನ 3 ಕ್ಕೆ ಚಿತಾಪುರದಲ್ಲಿ ಅಂತ್ಯಕ್ರಿಯೆ
ಕಲ್ಬುರ್ಗಿಃ ಜಿಲ್ಲೆಯ ಚಿತಾಪುರ ಮೂಲ ನಿವಾಸಿಗಳಾದ ಖ್ಯಾತ ವೈದ್ಯರಾದ ಡಾ.ಚಂದ್ರಪ್ಪ ರೇಷ್ಮಿ (90) ಅವರು ವಯೋಸಹಜ ತೀವ್ರ ಅನಾರೋಗ್ಯದಿಂದ ಕಲ್ಬುರ್ಗಿಯಲ್ಲಿ ಶನಿವಾರ ನಿಧನರಾದರು.
ಅಮೇರಿಕಾ ಪ್ರಜೆಯಾಗಿರುವ ಪತ್ನಿ ಕ್ಯಾಥರಿನ್ ಜಿನ್ನಿಸ್ ರೇಷ್ಮಿ, ಮಗ ಚಂದ್ರ ಜಿನ್ನಿಸ್ ರೇಷ್ಮಿ ಮತ್ತು ಮಗಳು ಶಾಲಿನಿ ರೇಷ್ಮಿ ಇದ್ದಾರೆ.
ಅಮೇರಿಕದಲ್ಲಿಯೇ ಸುಮಾರು 60 ವರ್ಷಗಳ ಕಾಲ ನೇತ್ರ ತಜ್ಞರಾಗಿ ತಮ್ಮ ಕುಟುಂಬ ಸಮೇತ ವಾಸವಾಗಿದ್ದ ಅವರು, ಜಗತ್ತಿನಾದ್ಯಂತ ತಮ್ಮ ವೃತ್ತಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.
ಭಾರತದ ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ ಸಿಂಗ್, ಖ್ಯಾತ ಉದ್ಯಮಿ ಜೆಆರ್ ಡಿ ಟಾಟಾ ಹಾಗೂ ಆಂದ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವಿಜಯಭಾಸ್ಕರ್ ರಡ್ಡಿ ಅವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಅಲ್ಲದೆ ಅವರು ಕರ್ನಾಟಕ ರಾಜ್ಯೋತ್ಸವ ಮತ್ತು ಪಿ.ಎಸ್.ಶಂಕರ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಮತ್ತು ಅಮೇರಿಕಾದಲ್ಲಿ ನೆತ್ರ ಚಿಕಿತ್ಸೆಗೆ (ಆರೋಗ್ಯ) ಸಂಬಂಧಿಸಿದ ಅಲ್ಲಿನ ಸಮಿತಿಯೊಂದರ ಸದಸ್ಯರಾಗಿ ಎರಡು ದಶಕ ಕಾಲ ಕಾರ್ಯನಿರ್ವಹಿಸಿದ ಕೀರ್ತಿ ಅವರದ್ದಾಗಿದೆ.
ಅವರು ಬದುಕಿನ ಕೊನೆಯ ದಿನಗಳನ್ನು ತಮ್ಮ ತವರು ಜಿಲ್ಲೆಯಲ್ಲಿ ಕಳೆಯಬೇಕೆಂಬ ಆಶಯ ಹೊಂದಿದ ಹಿನ್ನೆಲೆ ಆರೇಳು ವರ್ಷಗಳಿಂದ ಅಮೇರಿಕಾದಿಂದ ವಾಪಸ್ ಬಂದು ಕಲ್ಬುರ್ಗಿಯಲ್ಲಿ ವಾಸವಾಗಿದ್ದರು.
ಇಂದು ರವಿವಾರ ಮದ್ಯಾಹ್ನ ಚಿತಾಪುರದ ಅವರ ತೋಟದಲ್ಲಿ ಮದ್ಯಾಹ್ನ 3 ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.